ಲಂಚ ಸ್ವೀಕಾರ: ತಹಶೀಲ್ದಾರ್, ಗುಮಾಸ್ತ ಹಿಂಡಲಗಾ ಜೈಲಿಗೆ
ಲಂಚ ಸ್ವೀಕಾರ: ತಹಶೀಲ್ದಾರ್, ಗುಮಾಸ್ತ ಹಿಂಡಲಗಾ ಜೈಲಿಗೆ
ಲಂಚಕ್ಕೆ ಕೈಚಾಚಿದ ಅಧಿಕಾರಿಗಳಿಬ್ಬರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಚನ್ನಮ್ಮನಕಿತ್ತೂರಿನ ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಮತ್ತು ಗುಮಾಸ್ತ ಜಿ. ಪ್ರಸನ್ನ ಅವರು ಜೈಲು ಕಂಬಿಗಳ ಹಿಂದೆ ಜೀವನ ನಡೆಸುವಂತಾಗಿದೆ.
ಖೋದನಾಪುರ ರೈತ ರಾಜೇಂದ್ರ ಇನಾಮದಾರ ಅವರ ಜಮೀನಿನ ಖಾತಾ ಮಾಡಿಕೊಡಲು ಆರೋಪಿಗಳು ಬರೋಬ್ಬರಿ 5 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆ ಮಂಡಿಸಿದ್ದರು. ಇದರ ಮುಂಗಡ ಹಣವಾಗಿ ಎರಡು ಲಕ್ಷ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದಾಗ ಆರೋಪಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 10 ಲಕ್ಷ ರೂಪಾಯಿಗಳ ನಗದು ಹಾಗೂ ಅಪಾರ ಪ್ರಮಾಣದ ಮಹತ್ವದ ದಾಖಲೆಗಳು ಲಭ್ಯವಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ
ಕೋರ್ಟ್‌ನಲ್ಲಿ ಟಿಪ್ಸ್ ಪಡೆಯಲು ಪೇಟಿಎಂ ಬಳಕೆ: ಸಿಬ್ಬಂದಿಯನ್ನು ಅಮಾನತು ಮಾಡಿದ ಹೈಕೋರ್ಟ್
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ