ಬೀಡಿ ಕಟ್ಟುತ್ತಿದ್ದ ಸ್ಕೂಲ್ ಡ್ರಾಪ್ ಔಟ್ ಹುಡುಗ ಈಗ ಅಮೇರಿಕಾದಲ್ಲಿ ನ್ಯಾಯಾಧೀಶ!
ಬೀಡಿ ಕಟ್ಟುತ್ತಿದ್ದ ಸ್ಕೂಲ್ ಡ್ರಾಪ್ ಔಟ್ ಹುಡುಗ ಈಗ ಅಮೇರಿಕಾದಲ್ಲಿ ನ್ಯಾಯಾಧೀಶ!
ಕಾಸರಗೋಡಿನಲ್ಲಿ ಸ್ಕೂಲ್ ಡ್ರಾಪ್ ಔಟ್ ಆಗಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಹುಡುಗ ಈಗ ಅಮೇರಿಕಾದ ಟೆಕ್ಸಾಸ್‌ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಈ ಮೂಲಕ ನಾಡಿಗೆ ಹೆಮ್ಮೆ ತಂದಿದ್ದಾರೆ.
ಕಾಸರಗೋಡು ನಿವಾಸಿಯಾಗಿದ್ದ 52 ವರ್ಷದ ಸುರೇಂದ್ರನ್ ಕೆ. ಪಟೇಲ್ ಅಮೆರಿಕಾದ 240ನೇ ಜಿಲ್ಲಾ ನ್ಯಾಯಾಧೀಶರಾಗಿ ಆಗಿ ಆಯ್ಕೆಯಾಗಿದ್ದಾರೆ.
ಸುರೇಂದ್ರನ್ ತಮ್ಮ ಬಾಲ್ಯದ ಜೀವನದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿದ್ದರು. ಮತ್ತು ಅದೇ ಕಾರಣಕ್ಕೆ ಶಾಲಾ ಶಿಕ್ಷಣವನ್ನು ಪೂರೈಸಲಾಗದೆ ಮನೆಯಲ್ಲಿ ಬೀಡಿ ಕಟ್ಟಿ ಜೀವನ ನಡೆಸುವ ಕಠಿಣ ಪರಿಸ್ಥಿತಿ ಎದುರಿಸಿದ್ದರು.
ಆ ಬಳಿಕ, ಅವರ ಸ್ನೇಹಿತರೊಬ್ಬರು ಅವರಿಗೆ ಆರ್ಥಿಕ ಸಹಾಯ ಮಾಡಿದರು. ಇದರಿಂದ ಅವರು ಕಾನೂನು ಶಿಕ್ಷಣ ಪಡೆಯುವಲ್ಲಿ ಸಹಕಾರಿಯಾಯಿತು. ಶಿಕ್ಷಣ ಪಡೆಯುವ ಸಂದರ್ಭದಲ್ಲೇ ಅವರು ಸ್ಥಳೀಯ ಹೊಟೇಲ್‌ನಲ್ಲಿ ಉದ್ಯೋಗ ಮಾಡಿ ಜೀವನ ನಿರ್ವಹಣೆ ಮಾಡಿದ್ದರು..
ಕಾಸರಗೋಡು ಜಿಲ್ಲೆಯ ಬಳಾಲ್ ಎಂಬಲ್ಲಿ ಜನಿಸಿದ ಸುರೇಂದ್ರನ್, ಕರ್ನಾಟಕದಲ್ಲೇ 10 ವರ್ಷ ಕಾನೂನು ಸೇವೆ ಸಲ್ಲಿಸಿದ್ದರು ಎಂಬುದು ಗಮನಾರ್ಹ ವಿಷಯ.
ಕರ್ನಾಟಕದ ಗಡಿನಾಡು ಆಗಿರುವ ನೆರೆಯ ಕಾಸರಗೋಡಿನ ಯುವತಿಯನ್ನು ಮದುವೆಯಾದ ಬಳಿಕ ಅವರು ದೆಹಲಿಗೆ ತೆರಳಿದ್ದರು. ಪತ್ನಿ ದೆಹಲಿಯ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ವಿವಾಹವಾದ ಬಳಿಕ ಸುರೇಂದ್ರನ್, ಕೆಲ ಕಾಲ ಸುಪ್ರೀಂಕೋರ್ಟ್ನಲ್ಲೂ ವಕೀಲರಾಗಿ ಸೇವೆ ಸಲ್ಲಿಸಿದ್ದರು.
ನಂತರ ಪತ್ನಿ ಜೊತೆಗೆ ಅಮೆರಿಕಾಕ್ಕೆ ವಲಸೆ ಹೋದ ಸುರೇಂದ್ರನ್, ಅಲ್ಲಿ ಬಾರ್ ಪರೀಕ್ಷೆಯಲ್ಲಿ ಪಾಸ್ ಆದರು. ಇದೀಗ ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿ ವಿಶ್ವದ ಗಮನ ಸೆಳೆದಿದ್ದಾರೆ.
Read This Also:
ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?
What is a Decree..?: Definition & execution of a decree
ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್