-->
MVC Case- ವಿಮಾ ಕಂತು ಪಾವತಿ ಕ್ಷಣದಿಂದಲೇ ವಿಮೆ ಅನ್ವಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

MVC Case- ವಿಮಾ ಕಂತು ಪಾವತಿ ಕ್ಷಣದಿಂದಲೇ ವಿಮೆ ಅನ್ವಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ವಿಮಾ ಕಂತು ಪಾವತಿ ಕ್ಷಣದಿಂದಲೇ ವಿಮೆ ಅನ್ವಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ವಿಮಾ ಪಾಲಿಸಿಯ ಮೊತ್ತ ಪಾವತಿ ಮಾಡಿದ ಕ್ಷಣದಿಂದಲೇ ವಿಮೆ ಜಾರಿಗೆ ಬರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.



ಕಂತಿನ ಮೊತ್ತ ಸ್ವೀಕರಿಸಿದ ಕ್ಷಣದಿಂದ ಸಂಬಂಧಿಸಿದ ವಾಹನವು ರಿಸ್ಕ್ ಕವರ್ ಅಥವಾ ಡ್ಯಾಮೇಜ್ ಕ್ಲೇಮ್‌ ಪರಿಹಾರದ ವ್ಯಾಪ್ತಿಗೆ ಬರುತ್ತದೆ. ಅದರ ಹೊರತು ಪಾವತಿಸಿದ ದಿನದ ಮಧ್ಯರಾತ್ರಿಯಿಂದ ಅಲ್ಲ ಎಂದು ನ್ಯಾ. ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ.


ಘಟನೆ ವಿವರ

ಬೀದರ್ ಜಿಲ್ಲೆಯ ಸುಭಾಷ್ ಎಂಬುವರು ತಮ್ಮ ಮ್ಯಾಕ್ಸಿ ಕ್ಯಾಬ್ ಗೆ 2008ರ ಮೇ 7ರಂದು ಯುನೈಟೆಡ್ ಇಂಡಿಯಾ ಕಾರ್ಪೊರೇಷನ್ ಲಿ. ಏಜೆಂಟ್ ಗೆ ವಿಮಾ ಪಾಲಿಸಿಯ ಪ್ರೀಮಿಯಮ್ ಮೊತ್ತ ಪಾವತಿಸಿದ್ದರು. ಅದೇ ದಿನ ಮಧ್ಯಾಹ್ನ ವಾಹನ ಅಪಘಾತಕ್ಕೀಡಾಯಿತು. ಈ ದುರ್ಘಟನೆಯಲ್ಲಿ ಕ್ಯಾಬ್ ನಲ್ಲಿದ್ದ ಸುದರ್ಶನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.



ಈ ಬಗ್ಗೆ ದಾಖಲಾದ ಪ್ರಕರಣದ ವಿಚಾರಣೆ ನಡೆಸಿದ ಬೀದರ್ ವಿಚಾರಣಾ ನ್ಯಾಯಾಲಯ, ಅಪಘಾತದಲ್ಲಿ ಗಾಯಗೊಂಡಿರುವ ಸುದರ್ಶನ್ ಅವರಿಗೆ ಕ್ಯಾಬ್ ಮಾಲೀಕರೇ 1.7 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತು. ವಿಮೆ 2008ರ ಮೇ 8ರ ಮಧ್ಯರಾತ್ರಿ 12ರಿಂದ ಪ್ರಾರಂಭ ಆಗಿರುವುದರಿಂದ ವಿಮಾ ಕಂಪನಿ ಬಾಧ್ಯಸ್ಥವಲ್ಲ ಎಂದು 2012ರ ಜುಲೈ 27ರಂದು ಆದೇಶಿಸಿತ್ತು.



ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅರ್ಜಿದಾರ ಸುದರ್ಶನ್, ಪರಿಹಾರ ಮೊತ್ತ ಹೆಚ್ಚಿಸುವುದು ಮತ್ತು ಪರಿಹಾರ ಹೊಣೆಯನ್ನು ಕ್ಯಾಬ್ ಮೇಲೆ ಹೊರಿಸಿರುವುದನ್ನು ಪ್ರಶ್ನಿಸಿದ್ದರು.



ವಿಮಾ ಕಂಪೆನಿಯ ವಾದ: ಅಪಘಾತ ಮೇ 7ರ ಮಧ್ಯಾಹ್ನ 1-30ಕ್ಕೆ ಸಂಭವಿಸಿದೆ. ಕ್ಯಾಬ್ ಮಾಲೀಕರು ಬೆಳಗ್ಗೆ 10-30ಕ್ಕೆ ವಿಮೆ ಕಂತು ಪಾವತಿಸಿದ್ದರೂ ಅದು ಜ್ಯಾರಿಗೆ ಬರುವುದು ಮೇ 8ರ ಮಧ್ಯರಾತ್ರಿ 12ಕ್ಕೆ. ಆಗಲೇ ಕ್ಲೇಮು ಅರ್ಹತೆ ಇರುತ್ತದೆ. ಆ ಕಾರಣ, ವಿಮಾ ಕಂಪೆನಿಗೆ ಪರಿಹಾರ ನೀಡುವ ಬಾಧ್ಯತೆ ಇಲ್ಲ ಎಂಬುದು ವಿಮಾ ಕಂಪೆನಿ ವಾದ.


ಈ ವಾದ ತಿರಸ್ಕರಿಸಿದ ಹೈಕೋರ್ಟ್, ವಿಮಾ ಪಾಲಿಸಿ ಕಂತು ಹಣ ಪಾವತಿಸಿದ ಕ್ಷಣದಿಂದಲೇ ಹಾನಿ ಪರಿಹಾರದ ಹಕ್ಕು ಲಭಿಸುತ್ತದೆ. ವಿಮಾ ಕಂಪೆನಿ ಹಣ ಸ್ವೀಕರಿಸಿದ ಕ್ಷಣದಲ್ಲೇ ಹಾನಿ ಪರಿಹಾರ ನೀಡುವ ಒಪ್ಪಂದ ಊರ್ಜಿತವಾಗುತ್ತದೆ. ಆ ಕಾರಣ, ಸಂತ್ರಸ್ತ ಸುದರ್ಶನ್ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಬೇಕೆಂದು ಹೇಳಿರುವ ಪರಿಹಾರದ ಮೊತ್ತಕ್ಕಿಂತ ಹೆಚ್ಚುವರಿ 30,487 ರೂ. ಪಾವತಿಸಬೇಕು ಎಂದು ವಿಮಾ ಕಂಪೆನಿಗೆ ಆದೇಶಿಸಿದೆ.



Case Details: MFA NO 31894/2012 (Karnataka High Court)




Read This Also:

ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?



What is a Decree..?: Definition & execution of a decree




ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್‌



NI Act- ಭದ್ರತೆಗಾಗಿ ನೀಡಿದ ಚೆಕ್‌- Stop Payment ಷರಾದೊಂದಿಗೆ ಚೆಕ್ ಅಮಾನ್ಯ: ಸುಪ್ರೀಂ ಕೋರ್ಟ್‌ ತೀರ್ಪು ಹೇಳುವುದೇನು..?

Ads on article

Advertise in articles 1

advertising articles 2

Advertise under the article