-->
ಶಿಕ್ಷಕರ ಕ್ಷೇತ್ರದ ಉಪ-ಚುನಾವಣೆ: ವಕೀಲ ಎ.ಪಿ. ರಂಗನಾಥ್ ಕಣಕ್ಕೆ

ಶಿಕ್ಷಕರ ಕ್ಷೇತ್ರದ ಉಪ-ಚುನಾವಣೆ: ವಕೀಲ ಎ.ಪಿ. ರಂಗನಾಥ್ ಕಣಕ್ಕೆ

ಶಿಕ್ಷಕರ ಕ್ಷೇತ್ರದ ಉಪ-ಚುನಾವಣೆ: ವಕೀಲ ಎ.ಪಿ. ರಂಗನಾಥ್ ಕಣಕ್ಕೆ





ಬಿಜೆಪಿ ಪುಟ್ಟಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಉಪ ಚುನಾವಣೆ ಈಗಲೇ ರಂಗೇರಿದೆ.


ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ. ರಂಗನಾಥ್ ಅವರು ಈ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಅವರು ಜೆಡಿಎಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


2020ರ ನವೆಂಬರ್‌ನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪುಟ್ಟಣ್ಣ ಗೆಲುವು ಸಾಧಿಸಿದ್ದರು. ಆದರೆ, ವಿಧಾನ ಪರಿಷತ್ ಸದಸ್ಯತ್ವದ ಅವಧಿ ಪೂರ್ಣಗೊಳ್ಳುವ ಮೊದಲೇ ಅವರು ರಾಜೀನಾಮೆ ನೀಡಿ ಕೈಪಾಳಯ ಸೇರಿದರು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದೆ.


ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಢಲು ನಡೆಯಲಿರುವ ಉಪ ಚುನಾವಣೆಗೆ ಇನ್ನೂ ವೇಳಾಪಟ್ಟಿ ಘೋಷಣೆ ಮಾಡಿಲ್ಲ. ಮುಂದಿನ ಎರಡು ತಿಂಗಳಿನ ಒಳಗೆ ಚುನಾವಣಾ ಆಯೋಗ ವೇಳಪಟ್ಟಿ ಘೋಷಣೆ ಮಾಡುವ ಸಾಧ್ಯತೆ ಇದೆ.


Ads on article

Advertise in articles 1

advertising articles 2

Advertise under the article