-->
ಫ್ಯಾಮಿಲಿ ಕೋರ್ಟ್ ಡಿಕ್ರಿ, ಆದೇಶಕ್ಕೆ ಕಾಲಮಿತಿ: ದೆಹಲಿ ಹೈಕೋರ್ಟ್ ತೀರ್ಪು

ಫ್ಯಾಮಿಲಿ ಕೋರ್ಟ್ ಡಿಕ್ರಿ, ಆದೇಶಕ್ಕೆ ಕಾಲಮಿತಿ: ದೆಹಲಿ ಹೈಕೋರ್ಟ್ ತೀರ್ಪು

ಫ್ಯಾಮಿಲಿ ಕೋರ್ಟ್ ಡಿಕ್ರಿ, ಆದೇಶಕ್ಕೆ ಕಾಲಮಿತಿ: ದೆಹಲಿ ಹೈಕೋರ್ಟ್ ತೀರ್ಪು





ಕೌಟುಂಬಿಕ ನ್ಯಾಯಾಲಯಗಳ ಯಾವುದೇ ತೀರ್ಪು ಅಥವಾ ಡಿಕ್ರಿಯನ್ನು ಪ್ರಶ್ನಿಸಲು ಕಾಲಮಿತಿ ಇದ್ದು, ಡಿಕ್ರಿ ಅಥವಾ ಆದೇಶ ಪ್ರಕಟವಾದ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸತಕ್ಕದ್ದು ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.



ನ್ಯಾ. ಸಂಜೀವ್ ಸಚ್‌ದೇವ್ ಮತ್ತು ನ್ಯಾ. ವಿಕಾಸ್‌ ಮಹಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಹಿಂದೂ ವಿವಾಹ ಕಾಯ್ದೆ- 1955 ಮತ್ತು ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ 1984 ಮಧ್ಯೆ ಇದ್ದ ವ್ಯತ್ಯಾಸಗಳು ಇರುವುದನ್ನು ಗಮನಿಸಿದ ನ್ಯಾಯಪೀಠ ಈ ತೀರ್ಪು ಹೊರಡಿಸಿದೆ.

ಹಿಂದೂ ವಿವಾಹ ಕಾಯ್ದೆ 2003ರಲ್ಲಿ ತಿದ್ದುಪಡಿ ಆದಾಗ ಮೇಲ್ಮನವಿಗೆ 90 ದಿನಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ಆದರೆ, ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ 1984 ಪ್ರಕಾರ ಮೇಲ್ಮನವಿಗೆ 90 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ.


ಮೇಲ್ಮನವಿ ಸಲ್ಲಿಸಬಹುದಾದ ಆದೇಶ ಮತ್ತು ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವ ಗಡುವು 90 ದಿನಗಳ ಅವಧಿಯಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.


ಆದರೆ, ಎಲ್ಲೆಲ್ಲಿ ಕೌಟುಂಬಿಕ ನ್ಯಾಯಾಲಯ ಕಾಯ್ದೆ ಅನ್ವಯ ಫ್ಯಾಮಿಲಿ ಕೋರ್ಟ್ ಸ್ಥಾಪಿಸಲಾಗಿದೆಯೋ ಅಲ್ಲಿ ಕೌಟುಂಬಿಕ ನ್ಯಾಯಾಲಯ ಕಾಯ್ದೆ ಅನ್ವಯವಾಗಲಿದೆ. ಅದರಲ್ಲಿ ಸೆಕ್ಷನ್ 19ರಡಿ ತಿಳಿಸಿರುವಂತೆ ಆದೇಶ ಮತ್ತು ಡಿಕ್ರಿಗೆ ಮೇಲ್ಮನವಿ ಸಲ್ಲಿಸಲು ಕಾಲಮಿತಿ 30 ದಿನಗಳು ಮಾತ್ರ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200