-->
ಚೆಕ್ ಅಮಾನ್ಯ ಪ್ರಕರಣ: ಶಿಕ್ಷೆ ಸಂದರ್ಭ ಪರಿಹಾರದ ಮೊತ್ತದ ಪರಿಗಣನೆ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಅಮಾನ್ಯ ಪ್ರಕರಣ: ಶಿಕ್ಷೆ ಸಂದರ್ಭ ಪರಿಹಾರದ ಮೊತ್ತದ ಪರಿಗಣನೆ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಅಮಾನ್ಯ ಪ್ರಕರಣ: ಶಿಕ್ಷೆ ಸಂದರ್ಭ ಪರಿಹಾರದ ಮೊತ್ತದ ಪರಿಗಣನೆ- ಹೈಕೋರ್ಟ್ ಮಹತ್ವದ ತೀರ್ಪು






ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯನ್ನು ಅಪರಾಧಿ ಎಂದು ನಿರ್ಣಯಿಸುವಾಗ ದೂರುದಾರರಿಗೆ ಪರಿಹಾರದ ಮೊತ್ತ ನೀಡುವ ಮಹತ್ವವನ್ನೂ ಪರಿಗಣಿಸಬೇಕು ಎಂದು ಕೇರಳ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.



ಸಸಿ ಕುಮಾರ್ Vs ಉಷಾ ದೇವಿ ಮತ್ತೊಬ್ಬರು ಪ್ರಕರಣವನ್ನು ಇತ್ಯರ್ಥ ಮಾಡಿದ ನ್ಯಾ. ಸಿ.ಎಸ್. ಡಯಾಸ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.



ವಿಚಾರಣಾ ನ್ಯಾಯಾಲಯವಾಗಿದ್ದ ಅಳಪ್ಪುಳ ಜೆಎಂಎಸ್‌ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದು ಆರೋಪಿಗೆ ಒಂದು ತಿಂಗಳ ಸಾದಾ ಸಜೆ ಹಾಗೂ ರೂ. 25,000/- ದಂಡವನ್ನು ವಿಧಿಸಿತ್ತು.



ಸಜೆ ಹಾಗೂ ದಂಡದ ಮೊತ್ತವನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದು, ಅಳಪ್ಪುಳ ಸೆಷನ್ಸ್‌ ನ್ಯಾಯಾಲಯ ಶಿಕ್ಷೆಯ ಅವಧಿಯನ್ನು ಒಂದು ದಿನಕ್ಕೆ ಇಳಿಸಿ ರೂ. 25,000/- ದಂಡವನ್ನು ವಿಧಿಸಿ ತೀರ್ಪನ್ನು ಪ್ರಕಟಿಸಿತ್ತು.  ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.



ಸೋಮನ್ Vs ಕೇರಳ ರಾಜ್ಯ (2013) ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಉಲ್ಲೇಖಿಸಿದ ಕೇರಳ ಹೈಕೋರ್ಟ್‌, ಅಪರಾಧಿ ಎಂದು ಸಾಬೀತಾದ ಬಳಿಕ ಆರೋಪಿಗೆ ಶಿಕ್ಷೆ ಮತ್ತು ಪರಿಹಾರ ರೂಪಿಸಲು ಸಮರ್ಪಕವಾದ ಯಾವುದೇ ಶಾಸನಗಳಿಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್‌ನ ಹಲವಾರು ಪ್ರಕರಣಗಳನ್ನು ಮಾರ್ಗದರ್ಶಿಯಾಗಿ ಪರಿಗಣಿಸಿ ಚೆಕ್ ಮೌಲ್ಯದ ದ್ವಿಗುಣ ಮೊತ್ತದ ಪರಿಹಾರವನ್ನು ಪ್ರಕಟಿಸುವುದು ನ್ಯಾಯಸಮ್ಮತ ಎಂದು ಹೇಳಿತು.



ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್-1881 ಕಾಯ್ದೆಗೆ 1988 ಮತ್ತು 2002ರಲ್ಲಿ ಮಾಡಲಾದ ತಿದ್ದುಪಡಿಯ ನಂತರ ಸೆಕ್ಷನ್ 138ರ ಅಡಿಯ ಅಪರಾಧ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ತಪ್ಪಿತಸ್ಥ ಎಂದು ಸಾಬೀತಾದ ಆರೋಪಿಗೆ ಗರಿಷ್ಟ ಚೆಕ್ ಮೌಲ್ಯದ ದ್ವಿಗುಣ ಮೊತ್ತದ ದಂಡ ಮತ್ತು ಎರಡು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಶಿಕ್ಷೆ ನೀಡಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.



Ads on article

Advertise in articles 1

advertising articles 2

Advertise under the article