-->
ಗದಗದಲ್ಲಿ ಭಾನುವಾರ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಅವರ "ಸಂವಿಧಾನ ಓದು" ಕೃತಿ ಬಿಡುಗಡೆ

ಗದಗದಲ್ಲಿ ಭಾನುವಾರ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಅವರ "ಸಂವಿಧಾನ ಓದು" ಕೃತಿ ಬಿಡುಗಡೆ

ಗದಗದಲ್ಲಿ ಭಾನುವಾರ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಅವರ "ಸಂವಿಧಾನ ಓದು" ಕೃತಿ ಬಿಡುಗಡೆ





ಪ್ರಖ್ಯಾತ ಸಂವಿಧಾನ ತಜ್ಞರೂ ಆಗಿರುವ ಮಾನ್ಯ ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳಾದ ಎಚ್. ಎನ್. ನಾಗಮೋಹನ ದಾಸ್ ಅವರು ಬರೆದ "ಸಂವಿಧಾನ ಓದು" ಪರಿಷ್ಕೃತ ಆವೃತ್ತಿ ಪುಸ್ತಕ ಬಿಡುಗಡೆ ಹಾಗೂ " ಸಶಕ್ತಿಕರಣ"ಕಾರ್ಯಕ್ರಮ ನವಂಬರ್ 26 ರಂದು ಬೆಳಿಗ್ಗೆ 11 ಕ್ಕೆ ಗದಗಿನ APMC ಆವರಣದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.


2018ರಿಂದ ಆರಂಭವಾದ 'ಸಂವಿಧಾನ ಓದು' ಅಭಿಯಾನ ರಾಜ್ಯಾದ್ಯಂತ ಜನಪ್ರಿಯವಾಯಿತು. ರಾಜ್ಯಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಲಕ್ಷಗಟ್ಟಲೆ 'ಸಂವಿಧಾನ ಓದು' ಪುಸ್ತಕದ ಪ್ರತಿಗಳನ್ನು ಪ್ರತಿ ಜನರ ಮನೆ- ಮನಗಳಿಗೆ ತಲುಪಿಸಲಾಗಿದೆ.


'ಸಂವಿಧಾನ ಓದು' ಅಭಿಯಾನದಲ್ಲಿ ಕನ್ನಡದ ಸಾವಿರಾರು ಪ್ರಜ್ಞಾವಂತರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ಜನರಲ್ಲಿ ಸಂವಿಧಾನದ ಮಹತ್ವದ ಅರಿವು ಮೂಡಿಸುವಲ್ಲಿ ಜೊತೆಯಾಗಿದ್ದಾರೆ.


ಅಲ್ಲದೇ ಸಂವಿಧಾನ ಓದು ಪುಸ್ತಕ ಇಂಗ್ಲಿಷ್ ,ಹಿಂದಿ ಭಾಷೆಯಲ್ಲಿ ಅನುವಾದಗೊಂಡಿದೆ. ಹಾಗೆಯೇ ಬೇರೆ ಇತರ ಭಾಷೆಗಳಲ್ಲೂ ಭಾಷಾಂತರ ಮಾಡುವ ಕೆಲಸ ಪ್ರಗತಿಯಲ್ಲಿದೆ.


ಈಗ ಸಂವಿಧಾನ ಓದು ಪುಸ್ತಕದ ಪರಿಷ್ಕೃತ ಆವೃತ್ತಿ ಬಿಡುಗಡೆ ಸನ್ನದ್ದವಾಗಿದೆ. ಮತ್ತಷ್ಟು ಸವಿವರವಾಗಿ ಸಂವಿಧಾನದ ಆಶಯಗಳನ್ನು ಜನರ ಬಳಿ ಒಯ್ಯುಲು ಇದು ಅನುಕೂಲವಾಗಲಿದೆ. ಈ ಯೋಜನೆಯ ಭಾಗವಾಗಿ 1 ಲಕ್ಷ ಸಂವಿಧಾನ ಓದು ಪುಸ್ತಕಗಳನ್ನು ಮುದ್ರಿಸಲಾಗಿದೆ.


ಸಂವಿಧಾನದ ಆಶಯಗಳ ಬೀಜ ಎಲ್ಲರ ಎದೆಯೋಳಗೆ ಚಿಗುರೊಡೆದು ಹಬ್ಬಲಿ ಎಂಬುದೇ ಈ ಅಭಿಯಾನದ ಪ್ರಮುಖ ಆಶಯವಾಗಿದೆ.

Ads on article

Advertise in articles 1

advertising articles 2

Advertise under the article