ವಾದಪತ್ರಗಳ ಗುಣಮಟ್ಟ ಕಳವಳಕಾರಿ, ಬಾರ್ ಗುಣಮಟ್ಟ ಸುಧಾರಿಸಬೇಕು: ವಕೀಲಿಕೆ ಬಗ್ಗೆ ಕರ್ನಾಟಕ ಹೈಕೋರ್ಟ್ ಆತಂಕ
ವಾದಪತ್ರಗಳ ಗುಣಮಟ್ಟ ಕಳವಳಕಾರಿ, ಬಾರ್‌ನ ಗುಣಮಟ್ಟ ಸುಧಾರಿಸಬೇಕು: ವಕೀಲಿಕೆ ಬಗ್ಗೆ ಕರ್ನಾಟಕ ಹೈಕೋರ್ಟ್ ಆತಂಕ
ಇತ್ತೀಚಿನ ದಿನಗಳಲ್ಲಿ ವಕೀಲಿಕೆಯ ಗುಣಮಟ್ಟ ಕುಸಿಯುತ್ತಿದೆ. ವಾದಪತ್ರಗಳನ್ನು ಪರಿಣಾಮಕಾರಿಯನ್ನಾಗಿ ಮಾಡುವಲ್ಲಿ ವಕೀಲರು ಸೋಲುತ್ತಿದ್ದಾರೆ. ಪ್ಲೀಡಿಂಗ್ ಗುಣಮಟ್ಟ ಗಣನೀಯವಾಗಿ ಸುಧಾರಿಸಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಕರಾವಳಿ ಮೂಲದ ಉದ್ಯಮಿ ಬಿ. ಆರ್. ಶೆಟ್ಟಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಕಳವಳ ವ್ಯಕ್ತಪಡಿಸಿದೆ.
ವಿದೇಶಕ್ಕೆ ತೆರಳಲು ತಮಗೆ ಅನುಮತಿ ನೀಡಬೇಕು ಮತ್ತು ಈ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಉದ್ಯಮಿ ಬಿ.ಆರ್. ಶೆಟ್ಟಿ ಅರ್ಜಿ ಸಲ್ಲಿಸಿದ್ದರು.
ಪ್ರತಿವಾದಿ ಬ್ಯಾಂಕ್‌ಗಳನ್ನು ಪ್ರತಿನಿಧಿಸಿದ್ದ ವಕೀಲರಾದ ಮನು ಕುಲಕರ್ಣಿ ಅವರ ಪ್ಲೀಡಿಂಗ್ ಬಗ್ಗೆ ಖುಷಿ ಇದೆ. ಒಂದೆರಡು ತೀರ್ಪುಗಳಲ್ಲಿ ನಾನು ಅವರಿಗೆ ಮೆಚ್ಚುಗೆ ಸೂಚಿಸಿದ್ದೇನೆ ಎಂದು ಹೇಳಿರುವ ನ್ಯಾ. ಕೃಷ್ಣ ದೀಕ್ಷಿತ್, ಪ್ಲೀಡಿಂಗ್ ಸರಿಯಾಗಿ ಇಲ್ಲದಿದ್ದರೆ ಜನರನ್ನು ಹೇಗೆ ರಕ್ಷಿಸುತ್ತೀರಿ. ಬಾರ್‌ನ ಗುಣಮಟ್ಟ ಸುಧಾರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.