-->
ಪೋಕ್ಸೋ ಸ್ಪೆಷಲ್ ಕೋರ್ಟ್ ಜಡ್ಜ್ ಆದೇಶಕ್ಕೆ ಹೈಕೋರ್ಟ್ ಆಕ್ರೋಶ- ಜಡ್ಜ್ ನಡೆ ಹಠಮಾರಿತನ, ನ್ಯಾಯಾಂಗ ನಿಂದನೆ ಎಂದ ನ್ಯಾಯಪೀಠ

ಪೋಕ್ಸೋ ಸ್ಪೆಷಲ್ ಕೋರ್ಟ್ ಜಡ್ಜ್ ಆದೇಶಕ್ಕೆ ಹೈಕೋರ್ಟ್ ಆಕ್ರೋಶ- ಜಡ್ಜ್ ನಡೆ ಹಠಮಾರಿತನ, ನ್ಯಾಯಾಂಗ ನಿಂದನೆ ಎಂದ ನ್ಯಾಯಪೀಠ

ಪೋಕ್ಸೋ ಸ್ಪೆಷಲ್ ಕೋರ್ಟ್ ಜಡ್ಜ್ ಆದೇಶಕ್ಕೆ ಹೈಕೋರ್ಟ್ ಆಕ್ರೋಶ- ಜಡ್ಜ್ ನಡೆ ಹಠಮಾರಿತನ, ನ್ಯಾಯಾಂಗ ನಿಂದನೆ ಎಂದ ನ್ಯಾಯಪೀಠ


ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಗಳನ್ನು ಹೊರಡಿಸಿದ್ದರೂ, ಅದಕ್ಕೆ ವ್ಯತಿರಿಕ್ತವಾದ ಆದೇಶಗಳನ್ನು ಹೊರಡಿಸಿದ ಚಿತ್ರದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ(2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ)ದ ನ್ಯಾಯಾಧೀಶರ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಮುರುಘಾ ಶರಣದ ಜಾಮೀನು ಕುರಿತು ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಧಿಕ್ಕರಿಸಿ, ಆರೋಪಿ ಮುರುಘಾ ಶರಣರ ವಿರುದ್ಧ ಬಾಡಿ ವಾರೆಂಟ್ ಹೊರಿಸಿದ ಹಾಗೂ ಆರೋಪಿ ತಮ್ಮ ಪಾಸ್‌ಪೋರ್ಟ್‌ನ್ನು ವಶಕ್ಕೆ ನೀಡಿದ್ದರೂ ಅದರ ನೈಜತೆ ಪರಿಶೀಲನೆಗೆ ಕಳುಹಿಸಿದ ಚಿತ್ರದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಕ್ರಮಕ್ಕೆ ಹೈಕೋರ್ಟ್ ನ್ಯಾಯಪೀಠ ತನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಇದೊಂದು ಹಠಮಾರಿತನದಿಂದ ಕೂಡಿದ ನ್ಯಾಯಾಂಗ ನಿಂದನೆ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ತೀಕ್ಷ್ಣವಾಗಿ ನುಡಿದಿದೆ.ವಿಶೇಷ ನ್ಯಾಯಾಲಯದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಹಾಗೂ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡದಂತೆ ಅರ್ಜಿದಾರರಿಗೆ ನಿರ್ಬಂಧ ವಿಧಿಸಿದ್ದರೂ, ಆರೋಪಿ ಮುರುಘಾ ಶರಣದ ಖುದ್ದು ಹಾಜರಾತಿಗೆ ನ್ಯಾಯಾಲಯ ಸೂಚನೆ ನೀಡಿರುವುದು ಪ್ರಶ್ನಾರ್ಹವಾಗಿದೆ ಎಂದು ನ್ಯಾಯಪೀಠ ಹೇಳಿದೆ.ಹೈಕೋರ್ಟ್‌ನ ಈ ಎರಡೂ ಆದೇಶಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಗಾಳಿಗೆ ತೂರಿದ್ದಾರೆ. ಈ ನಡೆ ನ್ಯಾಯಾಂಗದ ಶಿಸ್ತಿನ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳು ಸಂವಿಧಾನದ ನೈತಿಕತೆಯಿಂದ ನಿಯಂತ್ರಿತವಾಗಿದೆ. ಬದಲಾಗಿ ಸಾರ್ವಜನಿಕ ನೈತಿಕತೆಯಿಂದಲ್ಲ. ರೋಚಕಗೊಳಿಸಲಾದ ಪ್ರಕರಣವನ್ನು ಪ್ರಚಾರದಲ್ಲಿ ಉಳಿಸುವ ಪ್ರಯತ್ನ ಇದಾಗಿದೆ ಎಂದು ನ್ಯಾಯಪೀಠ ಕಟುವಾದ ಶಬ್ಧಗಳಲ್ಲಿ ಹೇಳಿದೆ.


ದೃಢೀಕೃತ ಪ್ರತಿಗೆ ಕಡತ ನೀಡದ ನ್ಯಾಯಾಧೀಶರು!


ಜಿಲ್ಲಾ ನ್ಯಾಯಾಲಯ ಹೊರಡಿಸಿರುವ ಎಲ್ಲ ಆದೇಶಗಳ ದೃಢೀಕೃತ ಪ್ರತಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಈ ಅರ್ಜಿ ಸಲ್ಲಿಸಿ ಸಾಕಷ್ಟು ಅವಧಿಯಾಗಿದ್ದರೂ ಈವರೆಗೂ ಯಾವೊಂದು ಪ್ರತಿಯನ್ನೂ ಒದಗಿಸಿಲ್ಲ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಎಲ್ಲ ಕಡತಗಳನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲದೆ, ದೃಢೀಕೃತ ಪ್ರತಿ ನೀಡುವುದಕ್ಕೆ ಯಾವುದೇ ಕಡತವನ್ನು ಬಿಡುಗಡೆ ಮಾಡಿಲ್ಲ ಎಂದು ವಕೀಲರಾದ ಸಿ.ವಿ. ನಾಗೇಶ್ ಮತ್ತು ಸಂದೇಶ್ ಚೌಟ ಪರಿಸ್ಥಿತಿಯನ್ನು ಹೈಕೋರ್ಟ್ ನ್ಯಾಯಪೀಠದ ಮುಂದೆ ವಿವರಿಸಿದರು.ಇಂತಹ ಸಂದರ್ಭಗಳಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಡವಳಿಕೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನ್ಯಾಯಪೀಠ ತಮ್ಮ ಆದೇಶದಲ್ಲಿ ಹೇಳಿದೆ.


Ads on article

Advertise in articles 1

advertising articles 2

Advertise under the article