ನ್ಯಾಯಾಂಗ ವ್ಯವಸ್ಥೆ ಕಾಪಾಡಿಕೊಳ್ಳುವುದು ವಕೀಲರ ಆದ್ಯ ಕರ್ತವ್ಯ: ನ್ಯಾ. ಉಮಾ ಎಂ.ಜಿ
Sunday, January 21, 2024
ನ್ಯಾಯಾಂಗ ವ್ಯವಸ್ಥೆ ಕಾಪಾಡಿಕೊಳ್ಳುವುದು ವಕೀಲರ ಆದ್ಯ ಕರ್ತವ್ಯ: ನ್ಯಾ. ಉಮಾ ಎಂ.ಜಿ
ವಕೀಲರು ಕೇವಲ ನ್ಯಾಯಕ್ಕಾಗಿ ಶ್ರಮಿಸುವುದು ಮಾತ್ರವಲ್ಲ. ಜೊತೆಗೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು. ಇದ ಕೂಡ ವಕೀಲರ ಆದ್ಯ ಕರ್ತವ್ಯವಾಗಬೇಕಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಉಮಾ ಎಂ.ಜಿ. ಅವರು ಕರೆ ನೀಡಿದ್ದಾರೆ.
ರಾಯಚೂರಿನಲ್ಲಿ ನಡೆದ ಅಖಿಲ ಭಾರತ ವಕೀಲ ಒಕ್ಕೂಟ (AILU) ಮಹಿಳಾ ವಕೀಲರ ರಾಜ್ಯ ಸಮಾವೇಶದ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳಾ ವಕೀಲರೂ ಪುರುಷರಿಗೆ ಸಮಾನವಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇಡೀ ಸಮಾಜ ಅವರ ಪ್ರಯತ್ನವನ್ನು ಗುರುತಿಸಿ ಅವರನ್ನು ಬೆಳೆಸುವ ಕೆಲಸವನ್ನು ಮಾಡಬೇಕಿದೆ ಎಂದು ಉಮಾ ಅವರು ಮಹಿಳಾ ವಕೀಲರ ಶ್ರಮವನ್ನು ಶ್ಲಾಘಿಸಿದರು.
ಅದೇ ರೀತಿ, ಮಹಿಳಾ ವಕೀಲರು ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದರಿಸುತ್ತಿದ್ದು, ಅವುಗಳ ಪರಿಹಾರಕ್ಕೆ ಇಂತಹ ಸಮಾವೇಶಗಳ ಮೂಲಕ ಒಂದೆಡೆ ಸೇರಿ ಚರ್ಚೆ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.