ಲೋಕ ಅದಾಲತ್ ದಿನಾಂಕ ಬದಲು: ಮರುನಿಗದಿಪಡಿಸಿ ಸುತ್ತೋಲೆ ಹೊರಡಿಸಿದ ಕಾನೂನು ಸೇವೆಗಳ ಪ್ರಾಧಿಕಾರ
ಲೋಕ ಅದಾಲತ್ ದಿನಾಂಕ ಬದಲು: ಮರುನಿಗದಿಪಡಿಸಿ ಸುತ್ತೋಲೆ ಹೊರಡಿಸಿದ ಕಾನೂನು ಸೇವೆಗಳ ಪ್ರಾಧಿಕಾರ
ಇದೇ ಶನಿವಾರ, 09-03-2024ರಂದು ನಡೆಯಲಿದ್ದ ರಾಷ್ಟ್ರೀಯ ಲೋಕ ಅದಾಲತ್ ದಿನಾಂಕವನ್ನು ಮರುನಿಗದಿಪಡಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.
ದಿನಾಂಕ 4-03-2024ರಂದು ಪತ್ರ ಬಿಡುಗಡೆ ಮಾಡಿರುವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ ಎಲ್ಲ ಜಿಲ್ಲೆಗಳಲ್ಲೂ ಶನಿವಾರ ನಡೆಯಬೇಕಿದ್ದ ಅದಾಲತ್ ದಿನಾಂಕವನ್ನು ಮುಂದೂಡಿದೆ.
09-03-2024ರಂದು ನಡೆಯಲಿದ್ದ ರಾಷ್ಟ್ರೀಯ ಲೋಕ ಅದಾಲತ್ ಕರ್ನಾಟಕದಲ್ಲಿ ದಿನಾಂಕ 16-03-2024ರಂದು ನಡೆಯಲಿದೆ.
ಮುಂದೂಡಲಾದ ದಿನಾಂಕದಲ್ಲಿ ನಡೆಯಲಿರುವ ಲೋಕ ಅದಾಲತ್‌ನ್ನು ಯಶಸ್ವಿಗೊಳಿಸಲು ಎಲ್ಲ ಜಿಲ್ಲೆಗಳಲ್ಲೂ ಕಾನೂನು ಸೇವೆಗಳ ಪ್ರಾಧಿಕಾರ ಸೂಕ್ತ ಪೂರ್ವತಯಾರಿ ನಡೆಸಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಅದಾಲತ್‌ನಲ್ಲಿ ಎಂದಿನಂತೆ ವಾಣಿಜ್ಯ ವ್ಯಾಜ್ಯಗಳು, ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ದಾವೆಗಳು ಹಾಗೂ ಮತ್ತಿತರ ದಾವೆಗಳು, ಕೇಸ್‌ಗಳನ್ನು ಉಭಯ ಪಕ್ಷಕಾರರ ಪರಸ್ಪರ ಒಪ್ಪಿಗೆಯಿಂದ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ.