318 ಪಿಡಿಓಗಳ ಅಮಾನತು: ಅನುದಾನ ಬಳಕೆ ಮಾಡದ ಆರೋಪ- ಇಲಾಖೆ ಕಾರ್ಯದರ್ಶಿ ಸೂಚನೆ
Tuesday, September 24, 2024
318 ಪಿಡಿಓಗಳ ಅಮಾನತು: ಅನುದಾನ ಬಳಕೆ ಮಾಡದ ಆರೋಪ- ಇಲಾಖೆ ಕಾರ್ಯದರ್ಶಿ ಸೂಚನೆ
ರಾಜ್ಯದ 318 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶನ ನೀಡಿದೆ. ಸರ್ಕಾರದ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಕೆ ಮಾಡದ ಆರೋಪದ ಮೇಲೆ ಪಿಡಿಓಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಸಿಟಿಜನ್ ಪೋರ್ಟಲ್ ಮೂಲಕ ಸಲ್ಲಿಕೆಯಾದ ಬೇಡಿಕೆಯ ಆಧಾರದಲ್ಲಿಪ್ರತಿ ಪಂಚಾಯತ್‌ವಾರು ಪಟ್ಟಿ ಸಿದ್ಧಪಡಿಸಲಾಗಿತ್ತು. ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡುವ ಕಾರ್ಯದಲ್ಲಿ ಈ ಲೋಪ ಉಂಟಾಗಿದೆ.
ನಿಗದಿತ ಅವಧಿಯ ಒಳಗೆ ಶೌಚಾಲಯಗಳಿಗೆ ಬಿಡುಗಡೆ ಮಾಡಲಾದ ಅನುದಾನ ಬಳಸದ ಪಿಡಿಓಗಳು ಅಮಾನತು ಶಿಕ್ಷೆಗೆ ಒಳಗಾಗಲಿದ್ದಾರೆ. ನಿಗದಿತ ಅವಧಿಯ ಒಳಗೆ ಖರ್ಚು ಮಾಡದ ಪಿಡಿಓಗಳನ್ನು ಅಮಾನತು ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಇಲಾಖೆ ಪತ್ರ ಬರೆದಿದೆ.