-->
HSRP ನಂಬರ್ ಪ್ಲೇಟ್‌ ಹಾಕದ ವಾಹನ ಮಾಲೀಕರಿಗೆ ಕೊಂಚ ರಿಲೀಫ್‌: ದಂಡದ ಬಗ್ಗೆ ಹೈಕೋರ್ಟ್‌ ಹೇಳಿದ್ದೇನು..?

HSRP ನಂಬರ್ ಪ್ಲೇಟ್‌ ಹಾಕದ ವಾಹನ ಮಾಲೀಕರಿಗೆ ಕೊಂಚ ರಿಲೀಫ್‌: ದಂಡದ ಬಗ್ಗೆ ಹೈಕೋರ್ಟ್‌ ಹೇಳಿದ್ದೇನು..?

HSRP ನಂಬರ್ ಪ್ಲೇಟ್‌ ಹಾಕದ ವಾಹನ ಮಾಲೀಕರಿಗೆ ಕೊಂಚ ರಿಲೀಫ್‌: ದಂಡದ ಬಗ್ಗೆ ಹೈಕೋರ್ಟ್‌ ಹೇಳಿದ್ದೇನು..?





ಅತಿ ಸುರಕ್ಷಿತ ನೋಂದಣಿ ಫಲಕ (HSRP) ಗಳನ್ನು ಅಳವಡಿಸಿಕೊಳ್ಳದ ವಾಹನ ಮಾಲೀಕರು ಇನ್ನು ಕೆಲವು ದಿನಗಳ ಕಾಲ ಕೊಂಚ ರಿಲೀಫ್‌ ಆಗಿರಬಹುದು. HSRP ಬೋರ್ಟ್ ಅಳವಡಿಸದ ವಾಹನಗಳಿಗೆ ದಂಡ ಹಾಕಲಾಗುವುದು ಎಂಬ ಸಾರಿಗೆ ಸಚಿವರ ಬೆದರಿಕೆ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.


ನಿರ್ದಿಷ್ಟ ಡೀಲರ್‌ಗಳು ಮಾತ್ರ ಇಂತಹ ಬೋರ್ಡ್‌ಗಳನ್ನು ಅಳವಡಿಸಬೇಕು ಎಂಬುದಕ್ಕೆ ಸಲ್ಲಿಸಿದ್ದ ಆಕ್ಷೇಪಿಸಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 20ರ ವರೆಗೆ ಮುಂದೂಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೆ. ಕಾಮೇಶ್ವರ ರಾವ್ ಮತ್ತು ನ್ಯಾ. ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ.


ವಾಹನ ತಯಾರಿಸುವ ಮೂಲ ಸಾಧನಗಳ ಉತ್ಪಾದಕರಿಂದ ಅನುಮತಿ ಪಡೆದಿರುವ HSRP ಉತ್ಪಾದಕರು ಮಾತ್ರ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಪೂರೈಸಬೇಕು ಮತ್ತು ಅನುಮತಿ ಹೊಂದಿರುವ ಡೀಲರ್‌ಗಳು ಮಾತ್ರ HSRP ನಂಬರ್ ಪ್ಲೇಟ್ ಅಳವಡಿಸಬೇಕು ಎಂಬ ನಿರ್ಬಂಧ ಹಾಕಲಾಗಿತ್ತು.


ಅಲ್ಲದೆ, ನೂತನ ನಂಬರ್‌ ಪ್ಲೇಟ್‌ನ್ನು ಮೂರು ತಿಂಗಳ ಒಳಗೆ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಸುತ್ತೋಲೆಗೆ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಿಸ್ತೃತ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.


ಪಕ್ಷಕಾರರ ಪರ ಹಾಜರಿದ್ದ ವಕೀಲರ ವಿನಂತಿ ಮೇರೆಗೆ ಈ ಪ್ರಕರಣವನ್ನು ನವೆಂಬರ್ 20ಕ್ಕೆ ಮುಂದೂಡಲಾಯಿತು. ಇದರಿಂದ ರಾಜ್ಯದ ಜನರಿಗೆ ಸದ್ಯದ ಮಟ್ಟಿಗೆ ಕೊಂಚ ನಿರಾಳ ಅನುಭವವಾಗಿದೆ.


Ads on article

Advertise in articles 1

advertising articles 2

Advertise under the article