-->
ಹಣ ದುರ್ಬಳಕೆ, ಕರ್ತವ್ಯ ಲೋಪ: ಪುರಸಭೆ ಮುಖ್ಯಾಧಿಕಾರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ

ಹಣ ದುರ್ಬಳಕೆ, ಕರ್ತವ್ಯ ಲೋಪ: ಪುರಸಭೆ ಮುಖ್ಯಾಧಿಕಾರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ

ಹಣ ದುರ್ಬಳಕೆ, ಕರ್ತವ್ಯ ಲೋಪ: ಪುರಸಭೆ ಮುಖ್ಯಾಧಿಕಾರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ





ಪುರಸಭೆಯಲ್ಲಿ ಹಣ ದುರ್ಬಳಕೆ, ಕರ್ತವ್ಯ ಲೋಪ ಆರೋಪದ ಮೇಲೆ ಸ್ಥಳೀಯ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಅವರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಇನ್ನೂ 10 ವರ್ಷದ ಸೇವಾವಧಿ ಇತ್ತು.




ಸಮುದಾಯ ಸಂಘಟನಾಧಿಕಾರಿ ಎನ್ನುವ ಮೂಲ ಹುದ್ದೆ ಹೊಂದಿದ್ದ ಅವರ ವಿರುದ್ಧ ಗಂಭೀರ ಸ್ವರೂಪದ ಕರ್ತವ್ಯಲೋಪ ಸಾಬೀತಾದ ಕಾರಣಕ್ಕೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.


ಸರ್ಕಾರದ ಆದೇಶ ಆಧರಿಸಿ, ಧರಣೇಂದ್ರ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.


ಕಾರಟಗಿ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಸುರೇಶ್ ಅವರನ್ನು ಕುಷ್ಟಗಿಗೆ ಪ್ರಭಾರ ಮುಖ್ಯಾಧಿಕಾರಿ ಹುದ್ದೆಗೆ ಹೆಚ್ಚುವರಿಯಾಗಿ ನಿಯೋಜಿಸಿದ್ದಾರೆ.


ಡಿ.ಎನ್. ಧರಣೇಂದ್ರ ಕುಮಾರ್ ಹಾವೇರಿ ಜಿಲ್ಲೆ ಗುತ್ತಲ ಪಟ್ಟಣ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 2015ರಿಂದ 2018ರ ಅವಧಿಯಲ್ಲಿ ನಿಯಮಬಾಹಿರವಾಗಿ ಗುತ್ತಿಗೆದಾರರಿಗೆ 2.53 ಕೋಟಿ ರೂ. ಪಾವತಿಸಿದ್ದರು.


ಈ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ಅಲ್ಲಿನ ಜಿಲ್ಲಾಧಿಕಾರಿಯವರು ಆರೋಪಿ ಧರಣೇಂದ್ರ ಅವರನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.



Ads on article

Advertise in articles 1

advertising articles 2

Advertise under the article