-->
ಶೌಚಾಲಯದಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರು: ನ್ಯಾಯಾಲಯದ ಘನತೆಗೆ ಧಕ್ಕತೆ ತಂದ ವ್ಯಕ್ತಿಗೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಶೌಚಾಲಯದಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರು: ನ್ಯಾಯಾಲಯದ ಘನತೆಗೆ ಧಕ್ಕತೆ ತಂದ ವ್ಯಕ್ತಿಗೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಶೌಚಾಲಯದಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರು: ನ್ಯಾಯಾಲಯದ ಘನತೆಗೆ ಧಕ್ಕತೆ ತಂದ ವ್ಯಕ್ತಿಗೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌





ಶೌಚಾಲಯದಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾದ ವ್ಯಕ್ತಿಗೆ ಗುಜರಾತ್ ಹೈಕೋರ್ಟ್‌ 2 ಲಕ್ಷ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.

ಹೈಕೋರ್ಟ್ ಕಲಾಪದಲ್ಲಿ ಈತ ಭಾಗಿಯಾಗಿದ್ದು, ಆತನ ವರ್ತನೆ ನ್ಯಾಯಾಲಯದ ಘನತೆಗೆ ಧಕ್ಕತೆ ತಂದಿದೆ ಎಂದು ಗುಜರಾತ್ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಕೆ. ಠಕ್ಕರ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.


ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಮತ್ತು ಅಸಭ್ಯ ಕೃತ್ಯ ಸ್ವೀಕಾರಾರ್ಹವಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಪ್ರಕರಣದಲ್ಲಿ ಪ್ರತಿವಾದಿಯ ಪುತ್ರ ಧವಲ್‌ಬಾಯ್ ಕನುಭಾಯ್ ಪಟೇಲ್ ಎಂಬಾತ ಶೌಚಾಲಯದಿಂದಲೇ ಹೈಕೋರ್ಟ್ ಕಲಾಪಕ್ಕೆ ವರ್ಚುವಲ್ ವಿಚಾರಣೆ ಮೂಲಕ ಹಾಜರಾಗಿದ್ದ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿ ತನಿಖೆ ನಡೆಸುವಂತೆ ಮಾಡಿತು.


ನ್ಯಾಯಾಲಯ ವೀಡಿಯೋದಲ್ಲಿ ಇರುವ ವ್ಯಕ್ತಿಯನ್ನು ಗುರುತಿಸಲು ಸೋಲಾ ಪೊಲೀಸ್ ಠಾಣೆಗೆ ಸೂಚನೆ ನೀಡಿತು. ಆಗ ಈತನ ಕೃತ್ಯ ಬಯಲಾಯಿತು. ಘಟನೆಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ ಪ್ರತಿವಾದಿ (ತಂದೆ) ಹಾಗೂ ಅವರ ಪರ ವಕೀಲರು, ಈ ಘಟನೆ ಆಕಸ್ಮಿಕ ಹಾಗೂ ಉದ್ದೇಶಪೂರ್ವಕವಲ್ಲ ಎಂದು ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.


42 ವರ್ಷ ಪ್ರಾಯದ ಈತ ಪದವೀಧರನಾಗಿದ್ದು, ರಿಲಯನ್ಸ್ ಸಮೂಹ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಆತನಿಗೆ ಜೂಮ್ ಅಪ್ಲಿಕೇಷನ್ ಬಗ್ಗೆ ಗೊತ್ತಿಲ್ಲ ಎಂಬ ವಿಚಾರ ಒಪ್ಪತಕ್ಕದ್ದಲ್ಲ ಎಂದು ನ್ಯಾಯಪೀಠವು ನ್ಯಾಯಾಂಗದ ಘನತೆಗೆ ಧಕ್ಕೆ ತಂದ ವ್ಯಕ್ತಿಗೆ 2 ಲಕ್ಷ ರೂ.ಗಳ ಜುರ್ಮಾನೆ ವಿಧಿಸಿತು.


ಎರಡು ವಾರದೊಳಗೆ ದಂಡದ ಮೊತ್ತವನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಠೇವಣಿ ಇಡಬೇಕು ಎಂದು ನ್ಯಾಯಾಲಯ ಪಕ್ಷಕಾರರಿಗೆ ತಾಕೀತು ಮಾಡಿತು. ಠೇವಣಿ ನೀಡಿದ ಈ ಮೊತ್ತದಲ್ಲಿ ರೂ. 50 ಸಾವಿರ ಅಹಮದಾಬಾದ್‌ನ ಶಿಶು ಗೃಹ ಖಾತೆಗೆ ಹಾಗೂ ಉಳಿದ ಮೊತ್ತವನ್ನು ಗುಜರಾತ್ ಹೈಕೋರ್ಟ್ ಕಾನೂನು ನೆರವು ಸೇವೆಗಳ ಪ್ರಾಧಿಕಾರಗಳ ಖಾತೆಗೆ ಜಮಾ ಮಾಡುವಂತೆ ನಿರ್ದೇಶನ ನೀಡಿತು.



Ads on article

Advertise in articles 1

advertising articles 2

Advertise under the article