
ಕರ್ನಾಟಕ ಬ್ಯಾಂಕ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಬ್ಯಾಂಕ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ ಸಹಿತ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-03-2025
ಖಾಲಿ ಇರುವ ಹುದ್ದೆಗಳ ವಿವರ
ಚಾರ್ಟರ್ಡ್ ಅಕೌಂಟೆಂಟ್ - 25 ಹುದ್ದೆಗಳು
ಕಾನೂನು ಅಧಿಕಾರಿ -10 ಹುದ್ದೆಗಳು
ಸ್ಪೆಷಲಿಸ್ಟ್ ಆಫೀಸರ್ -10 ಹುದ್ದೆಗಳು
ಐ.ಟಿ. ಸ್ಪೆಷಲಿಸ್ಟ್ -30 ಹುದ್ದೆಗಳು
ಒಟ್ಟು ಖಾಲಿ ಇರುವ ಹುದ್ದೆಗಳು 75
ಶೈಕ್ಷಣಿಕ ವಿದ್ಯಾರ್ಹತೆ:
ಚಾರ್ಟರ್ಡ್ ಅಕೌಂಟೆಂಟ್ - ಮೊದಲ ಮೂರು ಪ್ರಯತ್ನಕ್ಕಿಂತ ಕಡಿಮೆಯಲ್ಲಿ ಸಿಎ ಪಾಸ್ ಆಗಿರಬೇಕು, 2024, 2025ರ ಬ್ಯಾಚ್‌ನ ಅಭ್ಯರ್ಥಿಗಳಿಗೆ ಆದ್ಯತೆ
ಕಾನೂನು ಅಧಿಕಾರಿ - ಟೈರ್ -1- ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿರಬೇಕು. 2024, 2025ರ ಬ್ಯಾಚ್‌ನ ಅಭ್ಯರ್ಥಿಗಳಿಗೆ ಆದ್ಯತೆ
ಸ್ಪೆಷಲಿಸ್ಟ್ ಆಫೀಸರ್ -ಎಂಬಿಎ ಪದವಿಯನ್ನು ಟೈರ್ -1- ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. 2024, 2025ರ ಬ್ಯಾಚ್‌ನ ಅಭ್ಯರ್ಥಿಗಳಿಗೆ ಆದ್ಯತೆ. ಶೇಕಡಾ 70ರ ಅಂಕದೊಂದಿಗೆ ಪಾಸ್ ಆಗಿರಬೇಕು.
ಐ.ಟಿ. ಸ್ಪೆಷಲಿಸ್ಟ್ -ಬಿ.ಇ.,, ಎಂಸಿಎ, ಎಂಟೆಕ್ ಪದವಿಗಳನ್ನು ಟೈರ್ -1- ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. 2024, 2025ರ ಬ್ಯಾಚ್‌ನ ಅಭ್ಯರ್ಥಿಗಳಿಗೆ ಆದ್ಯತೆ. ಶೇಕಡಾ 70ರ ಅಂಕದೊಂದಿಗೆ ಪಾಸ್ ಆಗಿರಬೇಕು.
ಹೆಚ್ಚಿನ ವಿವರಗಳಿಗೆ ಕರ್ನಾಟಕ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
www.karnatakabank.com/careers