
ಇ-ಖಾತಾ ನೋಂದಣಿ ಇನ್ನಷ್ಟು ಸುಲಭ- ಪಾಲಿಕೆ, ಬಿಬಿಎಂಪಿಯಿಂದ ಫ್ಲ್ಯಾಟ್, ಅಪಾರ್ಟ್‌ಮೆಂಟ್, ವಾಣಿಜ್ಯ ಕಟ್ಟಡಗಳಿಗೆ ಸುಲಭ ಪ್ರಕ್ರಿಯೆ
ಇ-ಖಾತಾ ನೋಂದಣಿ ಇನ್ನಷ್ಟು ಸುಲಭ- ಪಾಲಿಕೆ, ಬಿಬಿಎಂಪಿಯಿಂದ ಫ್ಲ್ಯಾಟ್, ಅಪಾರ್ಟ್‌ಮೆಂಟ್, ವಾಣಿಜ್ಯ ಕಟ್ಟಡಗಳಿಗೆ ಸುಲಭ ಪ್ರಕ್ರಿಯೆ
ತಾಜ್ಯದಲ್ಲಿ ಇ-ಖಾತಾ ನೋಂದಣಿಯನ್ನು ಇನ್ನಷ್ಟು ಸುಲಭ ಹಾಗೂ ಸುಲಲಿತವಾಗುವಂತೆ ಮಾಡಲಾಗಿದೆ. ಪೌರಾಡಳಿತ ಇಲಾಖೆ, ಮಹಾನಗರ ಪಾಲಿಕೆ ಮತ್ತು ಬಿಬಿಎಂಪಿಯಿಂದ ಫ್ಲ್ಯಾಟ್, ಅಪಾರ್ಟ್‌ಮೆಂಟ್, ವಾಣಿಜ್ಯ ಕಟ್ಟಡಗಳಿಗೆ ಇ-ಖಾತಾ ನೀಡಿಕೆಯಲ್ಲಿ ಇದ್ದ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ.
ನಗರದಲ್ಲಿ ಆಸ್ತಿದಾರರಿಗೆ ಇ ಖಾತಾ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಎಲ್ಲ ಆಸ್ತಿದಾರರೂ ಇ ಖಾತಾ ಪಡೆಯುವುದಕ್ಕಾಗಿ ಇದ್ದ ವ್ಯವಸ್ಥೆಯನ್ನು ಸುಲಭಗೊಳಿಸಲಾಗಿದೆ. ನಗರದಲ್ಲಿ ಹೆಚ್ಚಿನ ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳಿಗೆ ಹೊಸತಾಗಿ ಖಾತಾ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಸ್ವತಃ ಮಾಲೀಕರೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಬೆಂಗಳೂರಿನ ಆಸ್ತಿಗಳ ಮಾಲೀಕರು ತಮ್ಮ ಮಾಲಕತ್ವದ ಫ್ಲ್ಯಾಟ್, ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ಫ್ಲ್ಯಾಟ್‌ಗಳು ಮತ್ತು ಖಾತಾ ಇಲ್ಲದೇ ಇರುವ ನಿರ್ದಿಷ್ಟ ಫ್ಲ್ಯಾಟ್‌ಗಳಿಗೆ ಬಿಬಿಎಂಪಿ ವತಿಯಿಂದ ಹೊಸ ಖಾತಾ ರಚಿಸಿಕೊಳ್ಳಲಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಾಲಿಕೆಯ ಕಂದಾಯ ಅಧಿಕಾರಿಗಳು ನೀಡಲಿದ್ದಾರೆ.
ಈಗ ಇರುವ ಖಾತಾದಾರರು ಹೊಸತಾಗಿ ಇ ಖಾತಾ ಬಯಸಿ ಅರ್ಜಿ ಸಲ್ಲಿಸಿದರೆ ನಕಲಿ ಖಾತೆ ಪಡೆಯುವ ಪ್ರಯತ್ನಕ್ಕೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡಲಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಹೊಸ ಖಾತೆ ಪಡೆಯಲು ಆನ್‌ಲೈನ್‌ನಲ್ಲಿ ಪ್ರತಿನಿಧಿ ಅಥವಾ ಆಸ್ತಿ ಮಾಲೀಕರ ಆಧಾರ್ ಸಂಖ್ಯೆ ನಮೂದಿಸಬೇಕು. ಎ ಖಾತಾ ಬೇಕಾದಲ್ಲಿ ಕಟ್ಟಡದ ಅನುಮೋದಿತ ನಕ್ಷೆ ಮತ್ತು ಸ್ವಾಧೀನ ಪ್ರಮಾಣ ಪತ್ರ ಸಲ್ಲಿಸಬೇಕು. ಆಸ್ತಿಯ ಭಾವ ಚಿತ್ರವನ್ನು ಸಲ್ಲಿಕೆ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.