
ದೇಶದ ಭದ್ರತಾ ದೃಷ್ಟಿಯಿಂದ ಸೇನಾ ಕಾರ್ಯಾಚರಣೆ ನೇರ ಪ್ರಸಾರಕ್ಕೆ ತಡೆ: ಮಾಧ್ಯಮಕ್ಕೆ ಕೇಂದ್ರ ಸರ್ಕಾರ ಲಗಾಮು
Monday, April 28, 2025
ದೇಶದ ಭದ್ರತಾ ದೃಷ್ಟಿಯಿಂದ ಸೇನಾ ಕಾರ್ಯಾಚರಣೆ ನೇರ ಪ್ರಸಾರಕ್ಕೆ ತಡೆ: ಮಾಧ್ಯಮಕ್ಕೆ ಕೇಂದ್ರ ಸರ್ಕಾರ ಲಗಾಮು
ದೇಶದ ಭದ್ರತಾ ದೃಷ್ಟಿಯಿಂದ ಸೇನಾ ಕಾರ್ಯಾಚರಣೆಯನ್ನು ಯಾವುದೇ ನೇರ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಬಗ್ಗೆ ಸೂಚನಾ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಈ ಮೂಲಕ ಸೇನಾ ಕಾರ್ಯಾಚರಣೆಯ ಬೇಕಾಬಿಟ್ಟಿ ಸುದ್ದಿ ಪ್ರಚಾರ ನಡೆಸುವ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ.
ರೀಯಲ್ ಟೈಮ್ ಕವರೇಜ್, "ಮೂಲಗಳ ಪ್ರಕಾರ" ಎಂದು ಹೇಳಿಕೊಳ್ಳುವ ಸುದ್ದಿಗಳು, ರಕ್ಷಣಾ ಕಾರ್ಯಾಚರಣೆಗಳು ಮತ್ತು ಇತರ ವಿದ್ಯಮಾನಗಳ ಸುದ್ದಿ ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ದೇಶದ ಜನತೆಯ ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ಸಚಿವಾಲಯ ಮತ್ತು ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಯ ಸುದ್ದಿಯೂ ನಿರ್ಬಂಧಕ್ಕೊಳಪಟ್ಟಿದೆ.