
ಪತ್ನಿಯ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿಯ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿಯ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ಸಂವೇದನಾಶೀಲ ತೀರ್ಪನ್ನು ನೀಡಿದೆ.
ದೆಹಲಿ ಹೈಕೋರ್ಟ್‌ನ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
ಪತ್ನಿಯನ್ನು ತನ್ನ ಆಸ್ತಿ ಎಂದು ಪರಿಗಣಿಸುತ್ತಿದ್ದ ಕಾಲ ಈಗ ಮುಗಿದಿದೆ. ವಿವಾಹೇತರ ಸಂಬಂಧಗಳನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಹೊಟೇಲಿನ ರೂಮ್‌ನಲ್ಲಿ ಪತ್ನಿ ಪರ ಪುರುಷನೊಂದಿಗೆ ಲೈಂಗಿಕ ಸಂಬಂಧದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳು ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪತ್ನಿಯ ಪ್ರಿಯಕರನನ್ನು ಅಪರಾಧಿ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂದು ತೀರ್ಪು ನೀಡಿತು.
ಇದನ್ನು ಪ್ರಶ್ನಿಸಿ ಪತಿ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸೆಷನ್ಸ್ ಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ಗೆಳೆಯನಿಗೆ ನೋಟೀಸ್ ಜಾರಿಗೊಳಿಸಿತು.
ಈ ನೋಟೀಸ್‌ನ್ನು ಪ್ರಶ್ನಿಸಿ ಪ್ರಿಯಕರ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಪತಿ ತನ್ನ ಪತ್ನಿಯನ್ನು ಖಾಸಗಿ ಆಸ್ತಿ ಎಂದು ಪರಿಗಣಿಸುವುದು ಅಪಾಯಕಾರಿ ಪ್ರವೃತ್ತಿ ಎಂದು ತೀರ್ಪು ನೀಡಿತು.
ಮಹಾಭಾರತದ ದ್ರೌಪದಿಯ ಕಥೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಐದು ಜನ ಗಂಡಂದಿರಿದ್ದರೂ ಧರ್ಮರಾಜ ಮಾತ್ರ ಆಕೆಯನ್ನು ಜೂಜಿನಲ್ಲಿ ಪಣಕ್ಕಿಟ್ಟ. ಉಳಿದ ಗಂಡಂದಿರು ಮೂಕಪ್ರೇಕ್ಷಕರಾಗಿದ್ದರು. ಇದರಿಂದ ದ್ರೌಪದಿಯ ಘನತೆಗೆ ಧಕ್ಕೆ ಉಂಟಾಯಿತು. ಮಹಿಳೆಯನ್ನು ಆಸ್ತಿ ಎಂದು ಅಪಾಯಕಾರಿ ಎಂಬುದನ್ನು ಮಹಾಭಾರತದ ಯುದ್ಧವೇ ಸಾಬೀತುಪಡಿಸಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಹೇಳಿದ್ದಾರೆ.