
ಮೃತ ಅಧಿಕಾರಿಯ ಪತ್ನಿಯಿಂದ ಲಂಚ: ಮರಣ ಉಪದಾನದಲ್ಲೂ ಹಣ ಕಿತ್ತ ಖಚಾನೆ ಅಧಿಕಾರಿಗಳಿಬ್ಬರ ಬಂಧನ
ಮೃತ ಅಧಿಕಾರಿಯ ಪತ್ನಿಯಿಂದ ಲಂಚ: ಮರಣ ಉಪದಾನದಲ್ಲೂ ಹಣ ಕಿತ್ತ ಖಚಾನೆ ಅಧಿಕಾರಿಗಳಿಬ್ಬರ ಬಂಧನ
ನಿವೃತ್ತ ಅಧಿಕಾರಿಯ ಮರಣದ ಹಿನ್ನೆಲೆಯಲ್ಲಿ ಪತ್ನಿಗೆ ದೊರೆಯಬೇಕಾದ ಮರಣ ಉಪಧನದಲ್ಲೂ ಲಂಚಕ್ಕೆ ಕೈಚಾಚಿದ ಆರೋಪದಲ್ಲಿ ಖಜಾನೆಯ ಇಬ್ಬರು ಸಿಬ್ಬಂದಿಗಳನ್ನು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಬಂಧಿಸಿದ್ದಾರೆ. ಬಂಧಿತ ಖಜಾನೆ ಸಿಬ್ಬಂದಿಗಳನ್ನು ಬಸವೇಗೌಡ ಮತ್ತು ಭಾಸ್ಕರ್ ಎಂದು ಗುರುತಿಸಲಾಗಿದೆ.
ಬಂಟ್ವಾಳದ ಗ್ರಾಮ ಪಂಚಾಯಿತಿನಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ವ್ಯಕ್ತಿಯೊಬ್ಬರು ಕಳೆದು ವರ್ಷ ಮೃತಪಟ್ಟಿದ್ದು, ಅವರ ಮರಣದ ಉಪದಾನದ ಕುರಿತು ಸಂತ್ರಸ್ತರಿಂದ ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಅಧಿಕಾರಿಗಳು ಲಂಚಕ್ಕೆ ಕೈ ಚಾಚಿದರು.
ಈ ಸಂಬಂಧ ಮೃತ ಸರ್ಕಾರಿ ಅಧಿಕಾರಿಯ ಪತ್ನಿ ನೀಡಿದ ದೂರಿನಂತೆ ಲೋಕಾಯುಕ್ತ ಅಧಿಕಾರಿಗಳು ಬಂಟ್ವಾಳ ತಾಲೂಕು ಖಜಾನೆ (ಟ್ರೆಶರಿ) ಕಚೇರಿಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಭಾಸ್ಕರ್ ಹಾಗೂ ಪ್ರಥಮ ದರ್ಜೆ ಸಹಾಯಕ ಬಸವಗೌಡ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರ ವಿರುದ್ಧವು ಪ್ರಕರಣ ದಾಖಲಾಗಿದ್ದು ತನಗೆ ನಡೆಸಲಾಗುತ್ತಿದೆ.
ಪ್ರಕರಣದ ವಿವರ
ದೂರುದಾರ ಮಹಿಳೆಯ ಪತಿ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು, 2023ರ ಅಕ್ಟೋಬರ್ ನಲ್ಲಿ ವಯೋನಿವೃತ್ತಿ ಹೊಂದಿದ್ದರು. 2024ರ ಜೂನ್ ನಲ್ಲಿ ಅವರು ಅಸೌಖ್ಯದಿಂದ ನಿಧನರಾಗಿದ್ದರು.
ದೂರುದಾರ ಮಹಿಳೆ ತನ್ನ ಗಂಡನ ಮರಣ ಉಪದಾನದ ಬಗ್ಗೆ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಬಳಿ ಎರಡು ಬಾರಿ ವಿಚಾರಿಸಿದರು. ಆದರೆ, ಆತನಿಂದ ಯಾವುದೇ ಕೆಲಸ ಆಗಿಲ್ಲ ಎಂದು ದೂರುದಾರರು ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಕೊನೆಗೂ ಉಪದಾನವನ್ನು ಜಮೆ ಮಾಡಿದ್ದಕ್ಕೆ ಪ್ರತಿಫಲವಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ 5,000/- ಹಾಗೂ ಬಂಟ್ವಾಳ ಖಜಾನೆಯ ಪ್ರಥಮ ದರ್ಜೆ ಸಹಾಯಕ ಬಸವೇಗೌಡ ಬಿಎನ್ 5000/- ಲಂಚಕ್ಕೆ ಬೇಡಿಕೆ ಇಟ್ಟಿದ್ದು ಈ ಬಗ್ಗೆ ಮಹಿಳೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.