-->
ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಪ್ರಮಾಣವಚನ ಸ್ವೀಕಾರ

ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಅಧಿಕಾರ ಸ್ವೀಕರಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಗವಾಯಿ ಅವರಿಗೆ ಗೌಪ್ಯತಾ ವಿಧಿಯನ್ನು ಬೋಧಿಸಿದರು.

ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರುತ್ತಿರುವ ಮೊದಲ ಬೌದ್ಧ ಧರ್ಮೀಯ ಹಾಗೂ ದಲಿತ ಸಮುದಾಯದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಗವಾಯಿ ಅವರು ಪಾತ್ರರಾಗಿದ್ದಾರೆ.

ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ನವೆಂಬರ್ 23 2025 ರಂದು ನಿವೃತ್ತರಾಗಲಿದ್ದಾರೆ. ಸಂಜೀವ್ ಖನ್ನ ಅವರ ನಿವೃತ್ತಿಯಿಂದ ತೆರವಾದ ಈ ಗೌರವಾನ್ವಿತ ಹುದ್ದೆಯನ್ನು ನ್ಯಾಯಮೂರ್ತಿ ಗವಾಯಿ ಅವರು ಅಲಂಕರಿಸುತ್ತಿದ್ದಾರೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ನವಂಬರ್ 24, 1960ರಂದು ಜನಿಸಿದ ನ್ಯಾಯಮೂರ್ತಿ ಗವಾಯಿ, ಅಂಬೇಡ್ಕರ್ ತತ್ವಗಳಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು.

ಅವರ ತಂದೆ ಆರ್‌ಎಸ್‌ ಗವಾಯಿ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖ ನಾಯಕರಾಗಿದ್ದರು. ಜೊತೆಗೆ ಬಿಹಾರ ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಪ್ರಮಾಣ ವಚನ ಸಮಾರಂಭದ ವೀಡಿಯೋ ದೃಶ್ಯಾವಳಿ:

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಪ್ರಮಾಣವಚನ ಸ್ವೀಕಾರ

Ads on article

Advertise in articles 1

advertising articles 2

Advertise under the article