
ವಕೀಲರಿಗೆ ಸಿಓಪಿ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಹತ್ವದ ಸೂಚನೆ
ವಕೀಲರಿಗೆ ಸಿಓಪಿ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಹತ್ವದ ಸೂಚನೆ
ಕರ್ನಾಟಕ ರಾಜ್ಯದಲ್ಲಿ 1961ರಿಂದ 2010ರ ನಡುವೆ ಕಾನೂನು ಪದವಿ ಪಡೆದವರಿಗೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ (ಸಿಓಪಿ) ಪಡೆಯಲು ಅರ್ಜಿ ಸಲ್ಲಿಸಬೇಕಾದ ಗಡುವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಿಸ್ತರಿಸಿದೆ.
ರಾಜ್ಯದಲ್ಲಿ ಸಿಓಪಿ ಪಡೆಯಲು ವಕೀಲರಿಗೆ ಮೇ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
1961ರಿಂದ 2010ರ ನಡುವೆ ಕಾನೂನು ಪದವಿ ಪಡೆದವರಿಗೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ (ಸಿಓಪಿ) ಪಡೆಯದೆ ಇರುವವರು ರೂಪಾಯಿ 300/- ಸಾಮಾನ್ಯ ಶುಲ್ಕ ಮತ್ತು 1200/- ವಿಳಂಬ ಶುಲ್ಕ ಸೇರಿ ಒಟ್ಟು ರೂ. 1,500/- ಪಾವತಿಸಬೇಕಾಗಿದೆ.
ಅರ್ಜಿಯನ್ನು ಭೌತಿಕವಾಗಿ ಸಲ್ಲಿಸಬಹುದಾಗಿದೆ. ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಅಂಚೆ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ.
2010ರ ಜೂನ್ 12ರ ನಂತರ ಅಖಿಲ ಭಾರತ ವಕೀಲರ ಪರಿಷತ್ತು ಪರೀಕ್ಷೆ (AIBE) ಉತ್ತೀರ್ಣರಾಗಿ ನೋಂದಣಿ ಮಾಡಿಕೊಂಡಿರುವವರು ಘೋಷಣಾ ಫಾರಂ ಅನ್ನು ಸಲ್ಲಿಸಿರದಿದ್ದರೆ ಅವರು ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೆಎಸ್‌ಬಿಸಿ ಅಧ್ಯಕ್ಷರಾದ ಶ್ರೀ ಎಸ್.ಎಸ್. ಮಿಟ್ಟಲಕೋಡ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.