-->
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ವಿಶ್ರಾಂತಿ: ವೃತ್ತಿ ಬದುಕಿನ ಕೊನೇ ದಿನದಲ್ಲೂ 11 ತೀರ್ಪು ಪ್ರಕಟಿಸಿದ ಓಕಾ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ವಿಶ್ರಾಂತಿ: ವೃತ್ತಿ ಬದುಕಿನ ಕೊನೇ ದಿನದಲ್ಲೂ 11 ತೀರ್ಪು ಪ್ರಕಟಿಸಿದ ಓಕಾ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ವಿಶ್ರಾಂತಿ: ವೃತ್ತಿ ಬದುಕಿನ ಕೊನೇ ದಿನದಲ್ಲೂ 11 ತೀರ್ಪು ಪ್ರಕಟಿಸಿದ ಓಕಾ





ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ತಮ್ಮ ವೃತ್ತಿ ಬದುಕಿನ ಕೊನೆಯ ದಿನದಲ್ಲೂ ಅಭಯ ಶ್ರೀನಿವಾಸ್ ಓಕಾ 11 ತೀರ್ಪುಗಳನ್ನು ಪ್ರಕಟಿಸಿ ಗಮನಸೆಳೆದಿದ್ದಾರೆ.


ತಾಯಿ ಮೃತಪಟ್ಟ ಕೆಲವೇ ಗಂಟೆಗಳ ಬಳಿಕ ಕರ್ತವ್ಯಕ್ಕೆ ಹಾಜರಾದ ಅವರು ಕರ್ತವ್ಯದ ಕೊನೆಯ ದಿನದಲ್ಲೂ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಪ್ರದರ್ಶಿಸಿ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ಧಾರೆ.


ತಮ್ಮ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಗುರುವಾರ ಅವರ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಲು ಮುಂಬೈಗೆ ತೆರಳಿದ್ದ ನ್ಯಾಯಮೂರ್ತಿ ಓಕಾ ಮರುದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗುತ್ತಿರುವುದರಿಂದ ದೆಹಲಿಗೆ ಮರಳಿದ್ದರು.


ಸುಪ್ರೀಂ ಕೋರ್ಟ್ ಸಂಪ್ರದಾಯದಲ್ಲಿ ಸಣ್ಣ ಬದಲಾವಣೆಯಾಗಿದ್ದು, ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಧ್ಯುಕ್ತ ಪೀಠದಲ್ಲಿ ಆಸೀನರಾಗುವ ಮುನ್ನ ನ್ಯಾಯಮೂರ್ತಿ ಓಕಾ ಅವರು ತಮ್ಮ ಪೀಠದಲ್ಲಿ ಕುಳಿತು 11 ತೀರ್ಪುಗಳನ್ನು ಪ್ರಕಟಿಸಿದರು.


ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಅಡ್ವಕೇಟ್ಸ್ ಆನ್ ರೆಕಾರ್ಡ್‌ ಎಸೋಸಿಯೇಷನ್‌ (ಸ್ಕೋರಾ) ವತಿಯಿಂದ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದ ನ್ಯಾ. ಓಕಾ ನಿವೃತ್ತಿ ಹೊಂದುವ ನ್ಯಾಯಮೂರ್ತಿಗಳು ಕೊನೆಯ ದಿನ ತಮ್ಮ ಪೀಠದಲ್ಲಿ ಆಸೀನರಾಗಿ ಕಲಾಪ ನಡೆಸದಿರುವ ಸಂಪ್ರದಾಯಕ್ಕೆ ತಮ್ಮ ಅಸಮ್ಮತಿ ಸೂಚಿಸಿದ್ದರು. ಮತ್ತು ಕೊನೆಯ ದಿನ ಕಲಾಪ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು.


ನಿವೃತ್ತಿ ಹೊಂದುವ ನ್ಯಾಯಮೂರ್ತಿಗೆ ನಿವೃತ್ತಿಯ ಕೊನೆಯ ದಿನ ಮಧ್ಯಾಹ್ನ 1-30ಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮ ಮಾಡುವುದು ರೂಢಿಗತ ಪ್ರಕ್ರಿಯೆ. ಹಾಗೆ ಮಾಡದೆ ಅದನ್ನು ತಡವಾಗಿ ಮಾಡಬೇಕು. ಅಂದು ಮಧ್ಯಾಹ್ನದ ಭೋಜನವಾದ ತಕ್ಷಣ, ನಿವೃತ್ತರಾಗಲಿರುವ ನ್ಯಾಯಮೂರ್ತಿಯನ್ನು ಮನೆಗೆ ಹೋಗಿ ಎಂದು ಏಕೆ ಹೇಳಬೇಕು. ಕೊನೆಯ ದಿನ ನ್ಯಾಯಮೂರ್ತಿಗಳು ಸಂಜೆ ನಾಲ್ಕು ಗಂಟೆಯ ವರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಕರ್ತವ್ಯದ ಕೊನೆಯ ದಿನದಲ್ಲೂ ಅವರು ಆತ್ಮತೃಪ್ತಿ ಹೊಂದಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದರು.


ನಿವೃತ್ತಿ ಎಂಬ ಪದವನ್ನು ನಾನು ದ್ವೇಷಿಸುತ್ತೇನೆ. ಕಳೆದ ಜನವರಿಯಿಂದ ಎಷ್ಟು ಸಾದ್ಯವೋ ಅಷ್ಟು ಪ್ರಕರಣಗಳ ವಿಚಾರಣೆ ನಡೆಸಲು ನಿರ್ಧರಿಸಿದ್ದೆ ಎಂದು ಅವರು ತಿಳಿಸಿದ್ದರು.





Ads on article

Advertise in articles 1

advertising articles 2

Advertise under the article