
ಹೈಕೋರ್ಟ್‌ನಲ್ಲಿ ಪಾರ್ಟಿ ಇನ್ ಪರ್ಸನ್ ವಾದ: ನೂತನ ಪ್ರಕ್ರಿಯೆಗೆ ರಿಜಿಸ್ಟ್ರಿಗೆ ಸೂಚನೆ ನೀಡಿದ ಕರ್ನಾಟಕ ಹೈಕೋರ್ಟ್
ಹೈಕೋರ್ಟ್‌ನಲ್ಲಿ ಪಾರ್ಟಿ ಇನ್ ಪರ್ಸನ್ ವಾದ: ನೂತನ ಪ್ರಕ್ರಿಯೆಗೆ ರಿಜಿಸ್ಟ್ರಿಗೆ ಸೂಚನೆ ನೀಡಿದ ಕರ್ನಾಟಕ ಹೈಕೋರ್ಟ್
ಪಾರ್ಟಿ ಇನ್ ಪರ್ಸನ್ ಅರ್ಜಿದಾರರ ಸಾಮರ್ಥ್ಯವನ್ನು ರಿಜಿಸ್ಟ್ರಿ ಪ್ರಾಮಾಣಿಕರಿಸಿ ಫಾರಂ ನಂಬರ್ 16 ನೀಡುವ ಮೊದಲು ಅವರ ಕ್ಷಮತೆಯನ್ನು ನಿರ್ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕರಣವೊಂದರಲ್ಲಿ ಈ ಸೂಚನೆ ನೀಡಿದೆ.
ಪಾರ್ಟಿ ಇನ್ ಪರ್ಸನ್ ಅರ್ಜಿದಾರರು ತಾವು ಸ್ವಯಂ ವಾದ ಮಾಡುತ್ತೇವೆ ಎಂಬುದನ್ನು ಪ್ರಮಾಣಿಕರಿಸುವ ಮುನ್ನ ಕರಡು ಸಿದ್ಧಪಡಿಸಿ ವಾದ ಮಂಡಿಸುವ ಅವರ ಸಾಮರ್ಥ್ಯವನ್ನು ರಿಜಿಸ್ಟ್ರಿ ಕಚೇರಿಯ ಮೌಲ್ಯಮಾಪನಕ್ಕೆ ಒಳಪಡಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರುದ್ರಪಟ್ಟಣದ ಸರ್ವೇ ನಂಬರ್ 27ರಲ್ಲಿ 3.10 ಎಕರೆ ಪ್ರದೇಶದಲ್ಲಿನ ಮುಸ್ಲಿಮರ 'ಸಮಾಧಿಭೂಮಿ' ಜಮೀನಿನ ಯಥೋಚಿತ ಸರ್ವೇ ನಡೆಸಿ ಹದ್ದುಬಸ್ತ್ ಮತ್ತು ದುರಸ್ತ್ ಮಾಡಿ ರಕ್ಷಿಸಲು ನಿರ್ದೇಶಿಸಬೇಕು ಎಂದು ಕೋರಿ ಆರ್ ಟಿ ನಗರದ ಮೊಹಮ್ಮದ್ ಇಕ್ಬಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದಲ್ಲಿ ಖುದ್ದು ಅರ್ಜಿದಾರರೇ ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ಅರ್ಜಿದಾರರು ಹಲವು ಅರ್ಜಿಗಳನ್ನು ಸಲ್ಲಿಸಿದ್ದು, ಈ ಅರ್ಜಿಗಳು ದಾರಿ ತಪ್ಪಿಸುವ ಮನವಿಗಳಿಂದ ಕೂಡಿದೆ ಎಂದು ಕಂಡುಕೊಂಡ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿತ್ತು.
ಈ ತೀರ್ಪಿನಲ್ಲಿ, ಕರ್ನಾಟಕ ಹೈಕೋರ್ಟ್ ಆರ್ಟಿ ಇನ್ ಪರ್ಸನ್ ನಿಯಮಗಳು 2018ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣದಲ್ಲಿ ಸ್ವಯಂ ವಾದ ಮಂಡಿಸುವ ಪಕ್ಷಕಾರರಿಗೆ ಹೊಸ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ.
ಪಕ್ಷಕಾರನಿಗೆ ಅಂತಹ ಸಾಮರ್ಥ್ಯ ಇದೆಯೇ ಎಂಬುದನ್ನು ರಿಜಿಸ್ಟ್ರಿ ಪ್ರಮಾಣಿಕರಿಸಿ ಆ ಬಳಿಕವೇ ಅರ್ಜಿದಾರರಿಗೆ ಫಾರಂ 16 ರನ್ನು ನೀಡುವ ಮೊದಲು ಅಂತಹ ವ್ಯಕ್ತಿಯು ವಾದವನ್ನು ಕಾನೂನಿಗೆ ಅನುಗುಣವಾಗಿ ವಾದಿಸಬಲ್ಲರೆ ಎಂಬುದನ್ನು ಹೊರಗೆ ಹಚ್ಚಿ ಮತ್ತು ಕರಡು ರಚಿಸುವ ಅವರ ಸಾಮರ್ಥ್ಯವನ್ನು ಪರಿಶೀಲಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದೆ.