-->
ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್‌ ಮಾಡಲು 43 ಸಾವಿರ ಲಂಚ: ಸರ್ವೇಯರ್, ಬ್ರೋಕರ್ ಅರೆಸ್ಟ್‌

ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್‌ ಮಾಡಲು 43 ಸಾವಿರ ಲಂಚ: ಸರ್ವೇಯರ್, ಬ್ರೋಕರ್ ಅರೆಸ್ಟ್‌

ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್‌ ಮಾಡಲು 43 ಸಾವಿರ ಲಂಚ: ಸರ್ವೇಯರ್, ಬ್ರೋಕರ್ ಅರೆಸ್ಟ್‌





ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಡಲು 43 ಸಾವಿರ ಲಂಚ ಪಡೆದುಕೊಂಡಿದ್ದ ಮಂಗಳೂರಿನ ಭೂ ಮಾಪಕ (ಸರ್ವೇಯರ್) ಮತ್ತು ಮಧ್ಯವರ್ತಿ (ಬ್ರೋಕರ್) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ಧಾರೆ.


ಮಂಗಳೂರಿನ ಬಜಾಲ್ ಮತ್ತು ಕಂಕನಾಡಿ ಗ್ರಾಮದ ಜಮೀನಿಗೆ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್‌ ಮಾಡಿಸಿಕೊಡುವುದಾಗಿ ಆರೋಪಿಗಳು ವ್ಯಕ್ತಿಯೊಬ್ಬರಿಂದ 43 ಸಾವಿರ ರೂ. ಪಡೆದುಕೊಂಡಿದ್ದರು.


ಮಂಗಳೂರಿನ ಕಂದಾಯ ಇಲಾಖೆಯ ಸರ್ವೇಯರ್ ನಂದೀಶ ಮತ್ತು ಬಿಜೈ ನಿವಾಸಿ ಮಧ್ಯವರ್ತಿ (ಕಮಿಷನ್ ಬ್ರೋಕರ್) ದಿವಾಕರ್ ಬಂಧಿತ ಆರೋಪಿಗಳು. 2025ರ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಜಮೀನಿಗೆ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್‌ನ್ನು ಕೋರಿಕೊಂಡಿದ್ದರು.


ಏಪ್ರಿಲ್ 2025ರಂದು ಸರ್ವೇ ನಡೆಸಿದ್ದ ನಂತರ ನಂದೀಶ ಅರ್ಜಿದಾರರಿಂದ ರೂ. 6500/- ಪಡೆದುಕೊಂಡಿದ್ದರು. ಅಲ್ಲದೆ, ಬ್ರೋಕರ್ ಕಡೆಯಿಂದ ರೂ. 20,000/- ಲಂಚವನ್ನು ಇನ್ನೊಬ್ಬ ಆರೋಪಿ ದಿವಾಕರ್‌ ಮೂಲಕ ಪಡೆದುಕೊಂಡಿದ್ದರು.


ಬಜಾಲ್ ಮತ್ತು ಕಂಕನಾಡಿ ಎರಡೂ ಗ್ರಾಮದ ಜಮೀನುಗಳ ಸಿಂಗಲ್ ಸೈಟ್ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ರೂ. 18000/- ಪಡೆದುಕೊಂಡಿದ್ದರು. ಜೂನ್ 18ರಂದು ಹೆಚ್ಚುವರಿಯಾಗಿ ರೂ. 2000/- ಲಂಚದ ಹಣ ಪಡೆಯುತ್ತಿರುವಾಗ ಸರ್ವೇಯರ್ ನಂದೀಶ ಮತ್ತು ಬ್ರೋಕರ್ ದಿವಾಕರ ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ, ಪೊಲೀಸ್ ಠಾಣೆಯ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ನೇತೃತ್ವದ ಪೊಲೀಸರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.


Ads on article

Advertise in articles 1

advertising articles 2

Advertise under the article