-->
ಬ್ಯಾಂಕಿಂಗ್ ವಲಯದಲ್ಲಿ ನೇಮಕಾತಿ: 50,000 ಸಿಬ್ಬಂದಿ ನೇಮಕಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿದ್ಧತೆ- ಪದವೀಧರ ಅಭ್ಯರ್ಥಿಗಳಿಗೆ ಇಲ್ಲಿದೆ ಮಾಹಿತಿ

ಬ್ಯಾಂಕಿಂಗ್ ವಲಯದಲ್ಲಿ ನೇಮಕಾತಿ: 50,000 ಸಿಬ್ಬಂದಿ ನೇಮಕಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿದ್ಧತೆ- ಪದವೀಧರ ಅಭ್ಯರ್ಥಿಗಳಿಗೆ ಇಲ್ಲಿದೆ ಮಾಹಿತಿ

ಬ್ಯಾಂಕಿಂಗ್ ವಲಯದಲ್ಲಿ ನೇಮಕಾತಿ: 50,000 ಸಿಬ್ಬಂದಿ ನೇಮಕಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿದ್ಧತೆ- ಪದವೀಧರ ಅಭ್ಯರ್ಥಿಗಳಿಗೆ ಇಲ್ಲಿದೆ ಮಾಹಿತಿ





ಬ್ಯಾಂಕಿಂಗ್ ವಲಯದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಸಿಬ್ಬಂದಿ ನೇಮಕಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕಾತಿ ಮಂಡಳಿ ಸಿದ್ಧತೆ ನಡೆಸಿದ್ದು, ಪದವೀಧರ ಅಭ್ಯರ್ಥಿಗಳಿಗೆ ಬ್ಯಾಂಕ್ ಸೇವೆ ಸೇರಲು ಅತ್ಯುತ್ತಮ ಅವಕಾಶ ಒದಗಿ ಬಂದಿದೆ.


ಹೆಚ್ಚುತ್ತಿರುವ ವ್ಯವಹಾರದ ಅಗತ್ಯವನ್ನು ಪೂರೈಸಲು ಮತ್ತು ವಹಿವಾಟನ್ನು ವಿಸ್ತರಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಕಾರಿ ವಲಯದ ಬ್ಯಾಂಕ್‌ಗಳು ಒಟ್ಟು ಸುಮಾರು 50,000 ಸಿಬ್ಬಂದಿ ನೇಮಕ ಮಾಡಿಕೊಡಲು ಮುಂದಾಗಿದೆ.


ಈ 50,000 ಸಿಬ್ಬಂದಿ ಪೈಕಿ 21 ಸಾವಿರ ಹುದ್ದೆಗಳು ಅಧಿಕಾರಿ ಹಂತ. ಉಳಿದ ಹುದ್ದೆಗಳು ಗುಮಾಸ್ತ ಹಾಗೂ ಇತರ ಹುದ್ದೆಗಳು. ವಿವಿಧ ಬ್ಯಾಂಕ್‌ಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ.


ದೇಶದ ಸರಕಾರಿ ಬ್ಯಾಂಕುಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಸ್‌ಬಿಐ 20,000 ಸಿಬ್ಬಂದಿ ನೇಮಕಕ್ಕೆ ನಿರ್ಧಾರ ಮಾಡಿದೆ. ಈ ಪೈಕಿ 5 ಪ್ರೊಬೇಷನರಿ ಅಧಿಕಾರಿಗಳು ಮತ್ತು 13,455 ಕಿರಿಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.


ಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಬ್ಯಾಂಕ್ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ.


2025ರ ಮಾರ್ಚ್ ಅಂತ್ಯದ ವೇಳೆಗೆ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಒಟ್ಟು 2,36,226 ಸಿಬ್ಬಂದಿ ಇದ್ದಾರೆ. ಎಸ್‌ಬಿಐ ನಲ್ಲಿ ಪ್ರತಿವರ್ಷ ಕೆಲಸ ತೊರೆಯುವವರ ಪ್ರಮಾಣ ಶೇಕಡ ಎರಡಕ್ಕಿಂತ ಕಡಿಮೆ ಇದೆ.


ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಿಎನ್‌ಬಿ 500 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಉಳಿದಂತೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4000 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.


ಸರಕಾರಿ ವಲಯದ ಬ್ಯಾಂಕ್‌ಗಳು ತಮ್ಮ ಅಧೀನ ಸಂಸ್ಥೆಗಳನ್ನು ಶೇರುಪೇಟೆಯಲ್ಲಿ ನೋಂದಾಯಿಸಿ ಅವುಗಳಲ್ಲಿ ಹೂಡಿಕೆಯ ನಗದೀಕರಣದ ಬಗ್ಗೆ ಪರಿಶೀಲನೆ ನಡೆಸುವಂತೆ ಹಣಕಾಸು ಸಚಿವಾಲಯವು ಸೂಚಿಸಿದೆ. ಅದರನ್ವಯ ಸಾರ್ವಜನಿಕ ಷೇರು ಹಂಚಿಕೆ ಅಥವಾ ಷೇರು ವಿಕ್ರಯಕ್ಕಾಗಿ ಸುಮಾರು 15 ಅಧೀನ ಸಂಸ್ಥೆಗಳು ಮತ್ತು ಸರಕಾರಿ ವಲಯದ ಬ್ಯಾಂಕ್ ಗಳ ಜಂಟಿ ಸಂಸ್ಥೆಗಳನ್ನು ಗುರುತಿಸಲಾಗಿದೆ.



Ads on article

Advertise in articles 1

advertising articles 2

Advertise under the article