-->
ಬಾಲ್ಯ ವಿವಾಹ ಕಾಯ್ದೆ 2006 ಕಾನೂನಿಗೆ ಮತ್ತಷ್ಟು ಬಲ: ಅಪ್ರಾಪ್ತರ ಮದುವೆ ತಯಾರಿ, ನಿಶ್ಚಿತಾರ್ಥ ಕೂಡಾ ಅಪರಾಧ!

ಬಾಲ್ಯ ವಿವಾಹ ಕಾಯ್ದೆ 2006 ಕಾನೂನಿಗೆ ಮತ್ತಷ್ಟು ಬಲ: ಅಪ್ರಾಪ್ತರ ಮದುವೆ ತಯಾರಿ, ನಿಶ್ಚಿತಾರ್ಥ ಕೂಡಾ ಅಪರಾಧ!

ಬಾಲ್ಯ ವಿವಾಹ ಕಾಯ್ದೆ 2006 ಕಾನೂನಿಗೆ ಮತ್ತಷ್ಟು ಬಲ: ಅಪ್ರಾಪ್ತರ ಮದುವೆ ತಯಾರಿ, ನಿಶ್ಚಿತಾರ್ಥ ಕೂಡಾ ಅಪರಾಧ!





ಬಾಲ್ಯ ವಿವಾಹ ಕಾಯ್ದೆ 2006 ಕಾನೂನಿಗೆ ಮತ್ತಷ್ಟು ಬಲ ಬಂದಿದೆ. ಅಪ್ರಾಪ್ತರ ಮದುವೆ, ಸಿದ್ಧತೆ, ನಿಶ್ಚಿತಾರ್ಥ ಮತ್ತು ಮದುವೆಗೆ ಪ್ರೋತ್ಸಾಹ ನೀಡಿದವರಿಗೂ ಶಿಕ್ಷೆ ಖಾತ್ರಿ ಮಾಡುವ ಕಲಂಗಳನ್ನು ಸೇರಿಸಲಾಗಿದೆ. ಪ್ರಬಲ ಬಾಲ್ಯ ವಿವಾಹ ನಿಷೇಧ ಕಾಯ್ದೆ 2025 ಅನ್ನು ಮುಂದಿನ ವಿಧಾನ ಮಂಡಳದ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.


ಪ್ರಸ್ತಾಪಿತ ಈ ಮಸೂದೆಯಲ್ಲಿ ಬಾಲ್ಯ ವಿವಾಹವನ್ನು ಮಾಡಲು ಯತ್ನಿಸಿದರೆ ಅಥವಾ ಸಿದ್ಧತೆ ನಡೆಸಿದರೆ ಅಥವಾ ಅಪ್ರಾಪ್ತರ ಜೊತೆ ನಿಶ್ಚಿತಾರ್ಥ ಕೂಡ ಅಪರಾಧ ಎಂದು ಪರಿಗಣಿಸಲಾಗುತ್ತದೆ.


ಎರಡು ವರ್ಷಗಳಿಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶ ಇದೆ.


ಬಾಲ್ಯ ವಿವಾಹ ಅಥವಾ ವಿವಾಹಕ್ಕೆ ಪ್ರೋತ್ಸಾಹ ನೀಡುವ ಅಥವಾ ಅದಕ್ಕೆ ಕಾರಣರಾಗುವ ಪೋಷಕರು ಮತ್ತು ಸಂಸ್ಥೆಯವರಿಗೆ ಎರಡು ವರ್ಷಗಳ ಸೆರೆಮನೆ ಮತ್ತು ಒಂದು ಲಕ್ಷ ದಂಡ ವಿಧಿಸುವ ಅವಕಾಶ ಈಗಾಗಲೇ ಜಾರಿಯಲ್ಲಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಯಲ್ಲಿ ಇದೆ.


ಈ ಕಾಯ್ದೆಯ ಪ್ರಕಾರ ಕಾನೂನು ಬದ್ಧ ಮದುವೆಯಾಗಲು ಹುಡುಗನಿಗೆ ಕನಿಷ್ಠ 21 ವರ್ಷ ಹಾಗೂ ಹುಡುಗಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಬಾಲ್ಯ ವಿವಾಹ ಪ್ರಕರಣ ವರದಿಯಾದ ಬಳಿಕ ಈ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.


ಆದರೆ, ಕೆಲವು ಸಮುದಾಯಗಳಲ್ಲಿ ಚಿಕ್ಕ ವಯಸ್ಸಿನ ಬಾಲಕ ಮತ್ತು ಬಾಲಕಿಯರ ನಡುವೆ ವಿವಾಹ ಮಾಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳುವ ಪದ್ಧತಿ ಜಾರಿಯಲ್ಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದರು.


ಬಾಲ್ಯ ವಿವಾಹ ನಡೆಯುವ ಅಂತವಸ್ತೆ ಅಲ್ಲದೆ ಅದರ ಸಿದ್ಧತೆಯ ಹಂತಗಳನ್ನು ತಡೆಯುವ ಗುರಿಯನ್ನು ನೂತನ ಮಸೂದೆ ಬಂದಿದೆ ಅಲ್ಲದೆ ಚಿಕ್ಕ ಮಕ್ಕಳ ವಿವಾಹ ಸಿದ್ಧತೆ ಅಥವಾ ನಿಶ್ಚಿತಾರ್ಥದಲ್ಲಿ ತೊಡಗಿದವರನ್ನು ಶಿಕ್ಷೆಗೆ ಗುರಿ ಪಡಿಸುವ ಜೊತೆಗೆ ಅಂತಹ ನಿಶ್ಚಿತಾರ್ಥಗಳನ್ನು ಅನುಚಿತ ಎಂದು ಘೋಷಿಸಲು ಮತ್ತು ಅಂತಹ ನಿಶ್ಚಿತಾರ್ಥಗಳಿಗೆ ನ್ಯಾಯಾಲಯಗಳು ತಡೆಯಾಜ್ಞೆ ಹೊರಡಿಸುವ ಆದೇಶವನ್ನು ನೀಡಲು ಅಧಿಕಾರವನ್ನು ಈ ಮಸೂದೆ ಕಲ್ಪಿಸಲಿದೆ.



Ads on article

Advertise in articles 1

advertising articles 2

Advertise under the article