-->
ಸನದು ಅಮಾನತು ಮಾಡಿಸಿಕೊಂಡ 1531 ವಕೀಲರು: 68553 ವಕೀಲರಿಗೆ ಸಿಓಪಿಗೆ ಅರ್ಜಿ ಸಲ್ಲಿಕೆ

ಸನದು ಅಮಾನತು ಮಾಡಿಸಿಕೊಂಡ 1531 ವಕೀಲರು: 68553 ವಕೀಲರಿಗೆ ಸಿಓಪಿಗೆ ಅರ್ಜಿ ಸಲ್ಲಿಕೆ

ಸನದು ಅಮಾನತು ಮಾಡಿಸಿಕೊಂಡ 1531 ವಕೀಲರು: 68553 ವಕೀಲರಿಗೆ ಸಿಓಪಿಗೆ ಅರ್ಜಿ ಸಲ್ಲಿಕೆ





ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಸೂಚನೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1531 ವಕೀಲರು ತಮ್ಮ ಸನದು ಅಮಾನತು ಮಾಡಿಸಿಕೊಂಡಿದ್ದು, ಇದುವರೆಗೆ 68,553 ವಕೀಲರು ಸರ್ಟಿಫಿಕೇಟ್‌ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.


ಸರ್ಟಿಫಿಕೇಟ್‌ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಜಿ ಸಲ್ಲಿಸಿದ ಬಗ್ಗೆ ವಕೀಲರು ತಮ್ಮ ಸನದು ಸ್ಟೇಟಸ್‌ನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.


ರಾಜ್ಯದಲ್ಲಿ ಒಟ್ಟು 1.29 ಲಕ್ಷ ವಕೀಲರು ಇದ್ದು, ಈ ಪೈಕಿ 59,784 ಮಂದಿ ವಕೀಲರು ಸರ್ಟಿಫಿಕೇಟ್‌ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಜಿ ಸಲ್ಲಿಸಿಲ್ಲ. ಇದರಲ್ಲಿ ಅನ್ಯ ವೃತ್ತಿ ನಿರತರು, ಸಚಿವರು, ನ್ಯಾಯಮೂರ್ತಿಗಳು, ಅಭಿಯೋಜಕರು, ಸಹಾಯಕ ಅಭಿಯೋಜಕರು, ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿ ಇದ್ದಾರೆ. ಇನ್ನಷ್ಟು ಮಂದಿ ಉದ್ಯಮ, ಇತರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.


ಇತರ ವೃತ್ತಿಯಲ್ಲಿ ತೊಡಗಿಸಿಕೊಂಡವರು ತಮ್ಮ ಸನದನ್ನು ಅಮಾನತಿನಲ್ಲಿ ಇಡಲು ಇನ್ನೊಂದೇ ವಾರ ಅವಕಾಶವಿದ್ದು, 15-07-2025ರಂದು ಕೊನೆ ದಿನವಾಗಲಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಅವರು ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article