
"ಅನುಕಂಪದ ನೌಕರಿ": 'ವಿವಾಹಿತ ಮಗಳು' ಸೇರ್ಪಡೆಗೆ ಕರ್ನಾಟಕ ಸರಕಾರ ಅಸ್ತು
"ಅನುಕಂಪದ ನೌಕರಿ": 'ವಿವಾಹಿತ ಮಗಳು' ಸೇರ್ಪಡೆಗೆ ಕರ್ನಾಟಕ ಸರಕಾರ ಅಸ್ತು
'ಅನುಕಂಪದ ಆಧಾರ'ದ ಮೇಲೆ ಸರಕಾರಿ ಉದ್ಯೋಗ ನೀಡುವಾಗ 'ವಿವಾಹಿತ ಮಗಳು' ಎಂಬ ಸಂಬಂಧವನ್ನೂ ಸೇರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
'ಅನುಕಂಪದ ಆಧಾರ'ದಲ್ಲಿ ಸರಕಾರಿ ಉದ್ಯೋಗ ನೀಡುವಾಗ ಮೃತರ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಎಂಬ ಪದಗಳ ಬಳಿಕ 'ವಿವಾಹಿತ ಮಗಳು' ಎಂಬುದನ್ನೂ ಸೇರಿಸಲಾಗಿದೆ.
ಕಾರ್ಕಳದ ನಕ್ಸಲ್ ನಿಗ್ರಹ ದಳದಲ್ಲಿ ದ್ವಿತೀಯ ದರ್ಜೆ ಸಹಾಯಕ ಆಗಿದ್ದ ಪಿ.ಜಗದೀಶ್ ಅವರ ಅವಿವಾಹಿತ ಸಹೋದರಿ ತಾರಾಗೆ ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕರ್ನಾಟಕ ಸಿವಿಲ್ ಸೇವಾ ನಿಯಮ 5ನ್ನು ಸಡಿಲಿಸಲಾಗಿದೆ.
ಈ ಹಿಂದೆ, 'ಅನುಕಂಪದ ಆಧಾರ'ದ ಮೇಲೆ ಸರಕಾರಿ ಉದ್ಯೋಗ ನೀಡುವಾಗ 'ವಿವಾಹಿತ ಮಗಳು' ಸಂಬಂಧವನ್ನು ಪರಿಗಣಿಸುತ್ತಿರಲಿಲ್ಲ.
'ಅನುಕಂಪದ ಆಧಾರ'ದಲ್ಲಿ ಸರಕಾರಿ ಉದ್ಯೋಗ ನೀಡುವಾಗ ಮೃತರ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಎಂಬ ಪದಗಳ ಸಂಬಂಧಕ್ಕೆ ಮಾತ್ರ ಸೀಮಿತವಾಗಿತ್ತು.
ಇದೀಗ 'ವಿವಾಹಿತ ಮಗಳು' ಸಂಬಂಧವೂ ಅನುಕಂಪದ ನೌಕರಿಗೆ ಅರ್ಹತೆ ಪಡೆದುಕೊಂಡಿದೆ.