-->
UPI Payment: ಯಪಿಐ ಬಳಕೆದಾರರು ಶುಲ್ಕ ನೀಡಬೇಕೆ?- ಆರ್‌ಬಿಐ ನೀಡಿದ ಸ್ಪಷ್ಟನೆ ಇದು..

UPI Payment: ಯಪಿಐ ಬಳಕೆದಾರರು ಶುಲ್ಕ ನೀಡಬೇಕೆ?- ಆರ್‌ಬಿಐ ನೀಡಿದ ಸ್ಪಷ್ಟನೆ ಇದು..

UPI Payment: ಯಪಿಐ ಬಳಕೆದಾರರು ಶುಲ್ಕ ನೀಡಬೇಕೆ?- ಆರ್‌ಬಿಐ ನೀಡಿದ ಸ್ಪಷ್ಟನೆ ಇದು..





ಯಪಿಐ ಬಳಕೆದಾರರು ಶುಲ್ಕ ನೀಡಬೇಕು ಎಂಬ ಗೊಂದಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತೆರೆ ಎಳೆದಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಅದು ಅಧಿಕೃತ ಸ್ಪಷ್ಟನೆ ನೀಡಿದೆ.


ಯಪಿಐ ಪಾವತಿ ವ್ಯವಸ್ಥೆಯು ಯಾವತ್ತಿಗೂ ಉಚಿತವಾಗಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ತಾವು ಹೇಳಿಲ್ಲ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಲೋತ್ರಾ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.


'ಎಂಡಿಆರ್ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ನನಗೆ ಕೇಳಲಾಗಿತ್ತು. ಒಂದಿಷ್ಟು ವೆಚ್ಚಗಳು ಇರುತ್ತವೆ. ವೆಚ್ಚಗಳನ್ನು ಯಾರೋ ಒಬ್ಬರು ಪಾವತಿಸ ಬೇಕಾಗುತ್ತದೆ. ಯಾರು ಪಾವತಿಸಬೇಕಾಗುತ್ತದೆ ಎಂಬುದು ಮುಖ್ಯ ಎಂದು ಅವರು ಹೇಳಿದ್ದರು.


ವ್ಯವಸ್ಥೆಯು ಸುಸ್ಥಿರವಾಗಿ ಇರಲು ವೈಯಕ್ತಿಕ ಮಟ್ಟದಲ್ಲಿ ಅಥವಾ ವ್ಯವಸ್ಥೆಯ ಮಟ್ಟದಲ್ಲಿ ಯಾರಾದರೂ ಹಣ ಪಾವತಿಸಬೇಕಾಗುತ್ತದೆ' ಎಂದು ಅವರು ವಿವರಣೆ ನೀಡಿದ್ದಾರೆ.


'ವ್ಯವಸ್ಥೆಯು ಈಗಲೂ ಉಚಿತವಾಗಿ ಇಲ್ಲ. ಅದಕ್ಕೆ ಯಾರೋ ಶುಲ್ಕ ನೀಡುತ್ತಿದ್ದಾರೆ, ಸರ್ಕಾರವು ವ್ಯವಸ್ಥೆಗೆ ಸಬ್ಸಿಡಿ ನೀಡುತ್ತಿದೆ... ಬಳಕೆದಾರರು ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಮಾತನ್ನು ನಾನು ಯಾವತ್ತೂ ಹೇಳಿಲ್ಲ' ಎಂದು ಅವರು ತಿಳಿಸಿದ್ದಾರೆ.


ಈ ಮೂಲಕ ಭವಿಷ್ಯದಲ್ಲಿ ಶುಲ್ಕ ನೀಡುವ ಅಪಾಯ ಇದ್ದೇ ಇದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article