
ನ್ಯಾಯಾಲಯಗಳಿಗೆ ನಾಲ್ಕು ದಿನ ಸತತ ರಜೆ: ವಕೀಲರಿಗೆ ಗೌರಿ-ಗಣೇಶ, ಚತುರ್ಥಿಯ ಸಂಭ್ರಮ
Saturday, August 23, 2025
ನ್ಯಾಯಾಲಯಗಳಿಗೆ ನಾಲ್ಕು ದಿನ ಸತತ ರಜೆ: ವಕೀಲರಿಗೆ ಗೌರಿ-ಗಣೇಶ, ಚತುರ್ಥಿಯ ಸಂಭ್ರಮ
ರಾಜ್ಯದ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ನಾಲ್ಕು ದಿನ ಸತತ ರಜೆ ಘೋಷಿಸಲಾಗಿದ್ದು, ನ್ಯಾಯಾಂಗ ಅಧಿಕಾರಿಗಳು, ನೌಕರರು ಮತ್ತು ವಕೀಲರ ಸಮುದಾಯ ಗೌರಿ-ಗಣೇಶ ಮತ್ತು ಗಣೇಶ ಚತುರ್ಥಿಯ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತಾಗಿದೆ.
ಆಗಸ್ಟ್ ತಿಂಗಳ ನಾಲ್ಕನೇ ಶನಿವಾರ ಇದ್ದ ರಜೆಯನ್ನು ಪೂರ್ಣ ಕರ್ತವ್ಯದ ದಿನವಾಗಿ ಪರಿಗಣಿಸಲಾಗಿದ್ದು, ಅಂದು ನ್ಯಾಯಾಲಯಗಳು ದೈನಂದಿನ ಕಲಾಪವನ್ನು ನಡೆಸಿದವು.
ವರಸಿದ್ಧಿ ವಿನಾಯಕ ವೃತ (ಗಣೇಶ ಚತುರ್ಥಿ) ಪ್ರಯುಕ್ತ ಆಗಸ್ಟ್ 27ರಂದು ಸಾರ್ವತ್ರಿಕ ರಜೆ ಇರುತ್ತದೆ. ಈ ಮಧ್ಯೆ ಆಗಸ್ಟ್ 25 ಮತ್ತು 26ರಂದು ನಿರ್ಬಂಧಿತರಜೆ ಎಂದು ಹೈಕೋರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನಗಳ ರಜೆ ಲಭಿಸಿದಂತಾಗಿದೆ.