
ತನ್ನ ಕಕ್ಷಿದಾರ ಮಹಿಳೆಯ ಮೇಲೆ ಅತ್ಯಾಚಾರ, ಬ್ಲ್ಯಾಕ್ ಮೇಲ್ ಆರೋಪ: ಕಾಮುಕ ವಕೀಲನ ಬಂಧನ
ತನ್ನ ಕಕ್ಷಿದಾರರ ಮೇಲೆ ಅತ್ಯಾಚಾರ, ಬ್ಲ್ಯಾಕ್ ಮೇಲ್: ಕಾಮುಕ ವಕೀಲನ ಬಂಧನ
ತನ್ನ ಕಕ್ಷಿದಾರರನ್ನೇ ಅತ್ಯಾಚಾರ ಮಾಡಿ ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾಮುಕ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಆರೋಪಿ ವಕೀಲನನನ್ನು ಕಲಬುರಗಿಯ ಮಲ್ಲಿನಾಥ ನರೋಣಿ ಎಂದು ಗುರುತಿಸಲಾಗಿದೆ.
ಈತ ತನ್ನ ಮಹಿಳಾ ಕಕ್ಷಿದಾರರಿಗೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ. ಈ ಬಗ್ಗೆ ಕಕ್ಷಿದಾರ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವಕೀಲ ಮಲ್ಲಿನಾಥ ನರೋಣಿಯನ್ನು ಬಂಧಿಸಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಕೀಲನ ಪತ್ನಿ ಹಾಗೂ ಪುತ್ರ ವಿರುದ್ಧವೂ ದೂರು ದಾಖಲಾಗಿದೆ.
ಸೋದರಮಾವನನ್ನೆ ಮದುವೆಯಾಗಿದ್ದ ಮಹಿಳೆ, ಒಂದು ವರ್ಷದ ನಂತರ ವೈಮನಸ್ಯ ಉಂಟಾಗಿ ವಿಚ್ಛೇದನ ಕೇಸ್ ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಮಹಿಳೆಯ ಪರ ಮಲ್ಲಿನಾಥ ವಕಾಲತ್ತು ವಹಿಸಿದ್ದರು.
ಕೇಸಿನ ವಿಚಾರ ಮಾತನಾಡಲು ಕರೆಸಿ ಕೊಂಡು ನಿರಂತರ ಅತ್ಯಾಚಾರವೆಸಗಿದ್ದಾರೆಂದು ಮಹಿಳೆ ಆಪಾದಿಸಿದ್ದಾಳೆ.