ದತ್ತು ಪಡೆದ ಮಗುವಿಗೆ ಕುಟುಂಬದ ಆಸ್ತಿಯಲ್ಲಿ ಪಾಲಿದೆಯೇ..?- ಕರ್ನಾಟಕ ಹೈಕೋರ್ಟ್‌ನ ತೀರ್ಪು ಹೇಳುವುದೇನು..?
ದತ್ತು ಪಡೆದ ಮಗುವಿಗೆ ಕುಟುಂಬದ ಆಸ್ತಿಯಲ್ಲಿ ಪಾಲಿದೆಯೇ..?- ಕರ್ನಾಟಕ ಹೈಕೋರ್ಟ್‌ನ ತೀರ್ಪು ಹೇಳುವುದೇನು..?
ದತ್ತು ಪಡೆದ ಮಗುವಿಗೆ ಕುಟುಂಬದ ಆಸ್ತಿಯಲ್ಲಿ ಪಾಲಿದೆಯೇ ಎಂಬ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಬಗೆಹರಿಸಿದೆ. ದತ್ತು ಪಡೆದ ಪೋಷಕರಿಗೆ ಹುಟ್ಟಿದ ಮಕ್ಕಳಂತೆ ದತ್ತು ಪಡೆದ ಕುಟುಂಬದಲ್ಲಿ ಆ ಮಗುವಿಗೆ ಎಲ್ಲ ಹಕ್ಕುಗಳು, ಕಟ್ಟುಪಾಡುಗಳು ಮತ್ತು ಅನುವಂಶಿಕ ಹಕ್ಕುಗಳು ದೊರೆಯುತ್ತವೆ ಎಂದು ಹೈಕೋರ್ಟ್ ಧಾರವಾಡ ವಿಭಾಗೀಯ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.
"ಸಿ.ಬಿ. ವೆಂಕಟೇಶುಲು ಮತ್ತಿತರರು ವಿರುದ್ಧ ಜಿ. ಧನಲಕ್ಷ್ಮಿ ಮತ್ತಿತರರು" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗ್ದೂಮ್ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ದತ್ತು ಪಡೆದ ಬಳಿಕ ಜೈವಿಕ ಕುಟುಂಬದೊಂದಿಗಿನ ಸಂಬಂಧಗಳ ವಿಭಜನೆಯು ಶಾಶ್ವತವಾಗಿದೆ ಮತ್ತು ಬದಲಾಯಿಸಲಾಗದು. ದತ್ತು ಸ್ವೀಕಾರವು ಒಮ್ಮೆ ಮಾನ್ಯವಾಗಿ ನೋಂದಾಯಿಸಿದ ನಂತರ, ಅದನ್ನು ನೋಂದಾಯಿತ ರದ್ದತಿ ಪತ್ರದ ಮೂಲಕ ರದ್ದುಗೊಳಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಒಂದು ವೇಳೆ, ಅಂತಹ ಪ್ರಯತ್ನ ನಡೆಸಿದರೂ ಅದು ಕಾಯ್ದೆಯ ಸೆಕ್ಷನ್ 15ಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಒಮ್ಮೆ ದತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ ಅದನ್ನು ದತ್ತು ಪೋಷಕರಾಗಲೀ ದತ್ತು ಮಕ್ಕಳಾಗಲೀ ರದ್ದು ಮಾಡಲಾಗದು. ಇದು ಸಾರ್ವಜನಿಕ ನೀತಿಗೆ ಮತ್ತು ಕಾನೂನು ಬದ್ಧತೆಗೆ ವಿರುದ್ಧವಾಗಿದೆ. ಹಾಗೆಯೇ, ದತ್ತಕ ಪ್ರಕ್ರಿಯೆಯಲ್ಲಿ ಇದು ವೈಯಕ್ತಿಕ ಸಂಬಂಧ, ವಾರೀಸು ಹಕ್ಕು ಮತ್ತು ಮಗುವಿನ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸ್ಥಿರವಾದ ಕಾನೂನಿನ ನಿಲುವಾಗಿದೆ ಎಂದು ನ್ಯಾಯಪೀಠ ಒತ್ತಿಹೇಳಿದೆ.
ಸಿ.ಬಿ. ವೆಂಕಟೇಶುಲು ಮತ್ತಿತರರು ವಿರುದ್ಧ ಜಿ. ಧನಲಕ್ಷ್ಮಿ ಮತ್ತಿತರರು
ಕರ್ನಾಟಕ ಹೈಕೋರ್ಟ್, RFA No. 100303/2018 Dated 09-04-2025
2025:KHC-D:6341-DB