
ಅನಧಿಕೃತ ಕಟ್ಟಡ ನಿರ್ಮಾಣ ತೆರವುಗೊಳಿಸುವ ಅಧಿಕಾರ ವ್ಯಾಪ್ತಿ ಸಿವಿಲ್ ಕೋರ್ಟ್‌ಗಿಲ್ಲ: ಕರ್ನಾಟಕ ಹೈಕೋರ್ಟ್
ಅನಧಿಕೃತ ಕಟ್ಟಡ ನಿರ್ಮಾಣ ತೆರವುಗೊಳಿಸುವ ಅಧಿಕಾರ ವ್ಯಾಪ್ತಿ ಸಿವಿಲ್ ಕೋರ್ಟ್‌ಗಿಲ್ಲ: ಕರ್ನಾಟಕ ಹೈಕೋರ್ಟ್
ಅನಧಿಕೃತ ನಿರ್ಮಾಣ ಮತ್ತು ಅದನ್ನು ತೆರವುಗೊಳಿಸುವ ವಿಷಯಗಳು ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊಳಪಟ್ಟಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಟೆಕ್ಸಾಸ್‌ನಲ್ಲಿ ವಾಸವಾಗಿರುವ ಸಿ. ಅರುಣ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಅನಧಿಕೃತ ನಿರ್ಮಾಣ ಮತ್ತು ಅದನ್ನು ತೆರವುಗೊಳಿಸುವ ವಿಷಯಗಳು ಬಿಬಿಎಂಪಿ ಕಾಯ್ದೆಯಡಿ ವಿಭಾಗೀಯ ಆಯುಕ್ತರ ವ್ಯಾಪ್ತಿಗೊಳಪಟ್ಟಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಡಾ. ಪಾಂಡುರಂಗ ನಾಯಕ್ ವಿರುದ್ಧ ಶ್ರೀಮತಿ ಜಯಶ್ರೀ (AIR 1990 Kant 236) ಹಾಗೂ ಮ್ಯಾಥ್ಯೂ ಫಿಲಿಪ್ ವಿರುದ್ಧ ಪಿ.ಓ. ಕೋಶಿ (AIR 1966 Mysore 74) ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿದ ನ್ಯಾಯಪೀಠ, ಸಿವಿಲ್ ಕೋರ್ಟ್‌ಗಳಿಗೆ ಅನಧಿಕೃತ ಕಟ್ಟಡ ನಿರ್ಮಾಣ ತೆರವುಗೊಳಿಸುವ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಸ್ಪಷ್ಟಪಡಿಸಿತು.
ಪ್ರಕರಣ: ಸಿ. ಅರುಣ್ ವಿರುದ್ಧ ಎಸ್. ಪ್ರಭಾಕರ್
ಕರ್ನಾಟಕ ಹೈಕೋರ್ಟ್, WP 24444/2025, Dated 13-08-2025