
ಕಾನೂನುಬಾಹಿರ ಮತಾಂತರದ ಮದುವೆ ಅಮಾನ್ಯ, ದಂಪತಿ ವ್ಯಾಖ್ಯೆಗೆ ಒಳಪಡುವುದಿಲ್ಲ: ಹೈಕೋರ್ಟ್
ಕಾನೂನುಬಾಹಿರ ಮತಾಂತರದ ಮದುವೆ ಅಮಾನ್ಯ, ದಂಪತಿ ವ್ಯಾಖ್ಯೆಗೆ ಒಳಪಡುವುದಿಲ್ಲ: ಹೈಕೋರ್ಟ್
ಮತಾಂತರ ಕಾನೂನು ಬಾಹಿರವಾಗಿದ್ದರೆ, ಅದರ ಆಧಾರದ ಮೇಲೆ ನಡೆಯುವ ವಿವಾಹವು ಸ್ವಯಂ ಚಾಲಿತವಾಗಿ ಅಮಾನ್ಯವಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸೌರಭ್ ಶ್ರೀವಾಸ್ತವ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಕಾನೂನುಬಾಹಿರ ಮತಾಂತರದ ಆಧಾರದ ಮೇಲೆ ನಡೆದ ವಿವಾಹದ ಸಂದರ್ಭದಲ್ಲಿ ಕಾನೂನಿನ ದೃಷ್ಟಿಯಲ್ಲಿ ಪುರುಷ ಮತ್ತು ಮಹಿಳೆಯರನ್ನು ದಂಪತಿ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ತಮ್ಮ ಶಾಂತಿಯುತ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಕೋರಿ ಮೊಹಮ್ಮದ್ ಬಿನ್ ಖಾಸಿಮ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಅರ್ಜಿದಾರರಾದ ಖಾಸಿಮ್ ಮುಸ್ಲಿಮರಾಗಿದ್ದು ಜೈನಾಬ್ ಪರ್ವಿನ್ ಅಲಿಯಾಸ್ ಚಂದ್ರಕಾಂತ ಅವರು ಹಿಂದೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ವಿಶೇಷ ವಿವಾಹ ಕಾಯಿದೆಯಡಿ ಇಬ್ಬರು ಅರ್ಜಿದಾರರು ವಿವಾಹ ಮಾಡಿಕೊಳ್ಳಲು ಅರ್ಹರು ಎಂದು ನ್ಯಾಯಪೀಠ ಹೇಳಿತು.
ಚಂದ್ರಕಾಂತ ಅವರು 2025 ಫೆಬ್ರವರಿ 22ರಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ಖಾನೈಹೆ ಅಲಿಯಾ ಅರ್ಫಿಯಾ ಅವರು ಪ್ರಮಾಣ ಪತ್ರ ನೀಡಿದ್ದರು.