-->
ಎಲ್ಲ ವೈದ್ಯರು ತಮ್ಮ ಹೆಸರಿನ ಮುಂದೆ ಡಾ. ಬಳಸುವಂತಿಲ್ಲ: ವೈದ್ಯ ಮಹಾ ನಿರ್ದೇಶನಾಲಯ

ಎಲ್ಲ ವೈದ್ಯರು ತಮ್ಮ ಹೆಸರಿನ ಮುಂದೆ ಡಾ. ಬಳಸುವಂತಿಲ್ಲ: ವೈದ್ಯ ಮಹಾ ನಿರ್ದೇಶನಾಲಯ

ಎಲ್ಲ ವೈದ್ಯರು ತಮ್ಮ ಹೆಸರಿನ ಮುಂದೆ ಡಾ. ಬಳಸುವಂತಿಲ್ಲ: ವೈದ್ಯ ಮಹಾ ನಿರ್ದೇಶನಾಲಯ





ಎಲ್ಲ ವೈದ್ಯರು ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂಬ ಪದ ಬಳಸುವಂತಿಲ್ಲ. ಇದಕ್ಕೆ ನಿರ್ಬಂಧವಿದೆ ಎಂದು ವೈದ್ಯ ಮಹಾ ನಿರ್ದೇಶನಾಲಯ ಹೇಳಿದೆ.


ಎಲ್ಲ ವೈದ್ಯರೂ ಡಾ. ಎಂದು ಮುಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆ ನಿರ್ಬಂಧವಿದೆ. ಈ ಬಗ್ಗೆ ವೈದ್ಯರಿಗೆ ಸೂಚನೆ ನಿರ್ದೇಶನವನ್ನು ಜಾರಿಗೊಳಿಸಿರುವ ವೈದ್ಯನಿರ್ದೇಶನಾಲಯ, ಸಾರ್ವಜನಿಕ ಗೊಂದಲ ತಡೆಗಟ್ಟುವುದು, ಪಾರದರ್ಶಕತೆ ಕಾಯ್ದುಕೊಳ್ಳುವುದು ಈ ಸೂಚನೆಯ ಉದ್ದೇಶ ಎಂದು ಹೇಳಿದೆ.


ಫಿಸಿಯೋಥೆರಪಿ ಸೇವೆ ನೀಡುವವರು ವಾಸ್ತವದಲ್ಲಿ ತಜ್ಞ ವೈದ್ಯರಲ್ಲ. ಅವರು ತಮ್ಮನ್ನು ತಾವು ವೈದ್ಯರು ಎಂದು ಬಿಂಬಿಸಿಕೊಳ್ಳುವಂತಿಲ್ಲ. ವೈದ್ಯರ ಸೂಚನೆಯ ಮೇರೆಗೆ ರೋಗಿಗಳಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ, ಅವರು ತಮ್ಮ ಹೆಸರಿನ ಮುನ್ನ ಡಾ. ಎಂದು ಬಳಸುವಂತಿಲ್ಲ ಎಂದು ವೈದ್ಯ ಮಹಾ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.


ಫಿಸಿಯೋಥೆರಪಿ ಕೋರ್ಸ್ ಮುಗಿಸಿದವರು ತಮ್ಮ ಹೆಸರಿಗೆ ಮೊದಲು ಡಾಕ್ಟರ್ ಎಂಬ ಪದನಾಮವನ್ನು ಬಳಸಬಹುದು ಎಂದು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ ಪಠ್ಯಕ್ರಮದಲ್ಲಿ ನಮೂದು ಮಾಡಲಾಗಿತ್ತು. ಇದಕ್ಕೆ ವೈದ್ಯಕೀಯ ಸಂಘಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದವು.


ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆದಿರುವ ಮಹಾ ನಿರ್ದೇಶನಾಲಯ, ಫಿಸಿಯೋಥೆರಪಿ ನೀಡುವವರು ತಮ್ಮ ಹೆಸರಿನ ಮುಂದೆ ಡಾ. ಎಂದು ಬಳಸುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

Advertise under the article