
ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸಕ್ರಮ: ಕರಡು ಅಧಿಸೂಚನೆಯ ಬಗ್ಗೆ ಸ್ಪಷ್ಟನೆ ನೀಡಿದ ನಿಗಮ
Saturday, September 27, 2025
ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸಕ್ರಮ: ಕರಡು ಅಧಿಸೂಚನೆಯ ಬಗ್ಗೆ ಸ್ಪಷ್ಟನೆ ನೀಡಿದ ನಿಗಮ
ಹೊರಗುತ್ತಿಗೆ ಸಿಬ್ಬಂದಿಯನ್ನು ಸಕ್ರಮಗೊಳಿಸುವ ಯಾವುದೇ ಕರಡು ಅಧಿಸೂಚನೆ ಸಿದ್ದಪಡಿಸಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸ್ಪಷ್ಟನೆ ನೀಡಿದೆ.
ಸಿಬ್ಬಂದಿಯ ಸಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಸಿದ್ದಪಡಿಸಿಲ್ಲ ಹಾಗೂ ಇಂತಹ ಕರಡು ಅಧಿಸೂಚನೆ ಸಿದ್ದಪಡಿಸುವ ಪ್ರಸ್ತಾವವು ನಿಗಮದ ಮುಂದೆ ಇಲ್ಲ ಎಂದು ಅದು ಹೇಳಿದೆ.
ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರು ನಿಗಮಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಈ ನೇಮಕಾತಿ ಪ್ರಸ್ತಾವವನ್ನು ಪರಿಶೀಲಿಸಲು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮಾಹಿತಿ ನೀಡಿದೆ.