-->
ಪರಿಶಿಷ್ಟ ಸಮುದಾಯ ಮಕ್ಕಳಿಗೆ ದಾರಿ ಬಳಸಲು ನಿರ್ಬಂಧ: ವೀಡಿಯೋ ವೈರಲ್, ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಪರಿಶಿಷ್ಟ ಸಮುದಾಯ ಮಕ್ಕಳಿಗೆ ದಾರಿ ಬಳಸಲು ನಿರ್ಬಂಧ: ವೀಡಿಯೋ ವೈರಲ್, ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಪರಿಶಿಷ್ಟ ಸಮುದಾಯ ಮಕ್ಕಳಿಗೆ ದಾರಿ ಬಳಸಲು ನಿರ್ಬಂಧ: ವೀಡಿಯೋ ವೈರಲ್, ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಪರಿಶಿಷ್ಟ ಸಮುದಾಯ ಸಮುದಾಯದ ವಿದ್ಯಾರ್ಥಿಗಳ ಗುಂಪಿಗೆ ಇಲ್ಲಿನ ದಾರಿಯೊಂದರಲ್ಲಿ ಸಾಗಲು ಬಿಡದೆ ನಿರ್ಬಂಧಿಸಿರುವ ಘಟನೆ ತಂಜಾವೂರಿನ ತಾಲ್ಲೂಕಿನ ಕೊಲ್ಲಂಗರೈ ಗ್ರಾಮದಲ್ಲಿ ನಡೆದಿದೆ.

ಇದಕ್ಕೆ ಸಂಬಂಧಿಸಿದಂತೆ ವೃದ್ಧೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಶಾಲಾ ಸಮವಸ್ತ್ರದಲ್ಲಿದ್ದ ಮಕ್ಕಳು ಇಲ್ಲಿನ ದಾರಿಯಲ್ಲಿ ಹಾದುಹೋಗಲು ಮುಂದಾಗುತ್ತಾರೆ. ಆಗ ವೃದ್ಧೆಯೊಬ್ಬರು ಕೈಯಲ್ಲಿ ಕೋಲು ಹಿಡಿದು ಕೆಲವು ಮಕ್ಕಳನ್ನು ಮಾತ್ರ ತಡೆಯುತ್ತಾರೆ. ಅ ದಾರಿಯಲ್ಲಿ ಹಾದು ಹೋಗಕೂಡದು ಎಂದು ಕೂಗಾಡುತ್ತಾರೆ. ಈ ದೃಶ್ಯ ವಿಡಿಯೊದಲ್ಲಿದೆ.

ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

'ಇಲ್ಲಿನ ಹಾದಿಯನ್ನು ಬಳಸಲು ನಮಗೆ ಅವಕಾಶ ನೀಡುತ್ತಿಲ್ಲ. ಬದಲಿ ಮಾರ್ಗದಲ್ಲಿ ಹೋಗುವಂತೆ ಒತ್ತಾಯಿಸು ತ್ತಾರೆ. ಆ ಮಾರ್ಗದಲ್ಲಿ ಹೋದರೆ 1.5 ಕಿ.ಮೀನಷ್ಟು ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ' ಎಂದು ಗ್ರಾಮಸ್ಥರು ದೂರಿದ್ದಾರೆ.

Ads on article

Advertise in articles 1

advertising articles 2

Advertise under the article