
ರೇವ್ ಪಾರ್ಟಿಗಳಿಗೆ ಮಾದಕ ದ್ರವ್ಯ ಖರೀದಿ ಆರೋಪ: ಪ್ರಕರಣ ರದ್ದು ವಿರುದ್ಧ ಸುಪ್ರೀಂಗೆ ಅರ್ಜಿ- ನಟಿ ಸಂಜನಾ ಗಲ್ರಾನಿಗೆ ನೋಟೀಸ್
ರೇವ್ ಪಾರ್ಟಿಗಳಿಗೆ ಮಾದಕ ದ್ರವ್ಯ ಖರೀದಿ ಆರೋಪ: ಪ್ರಕರಣ ರದ್ದು ವಿರುದ್ಧ ಸುಪ್ರೀಂಗೆ ಅರ್ಜಿ- ನಟಿ ಸಂಜನಾ ಗಲ್ರಾನಿಗೆ ನೋಟೀಸ್
ಪಂಚತಾರಾ ಹೊಟೇಲ್‌ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಮಾದಕ ದ್ರವ್ಯ ಖರೀದಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ರದ್ದುಪಡಿಸಿದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದೆ.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, ನಟಿ ಅರ್ಚನಾ ಗಲ್ರಾನಿ ಅಲಿಯಾಸ್ ಸಂಜನಾ ಗಲ್ರಾನಿ ಮತ್ತು ಇತರರಿಗೆ ನೋಟೀಸ್ ಜಾರಿಗೊಳಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ನಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.
2024ರ ಮಾರ್ಚ್ 25ರ ಹೈಕೋರ್ಟ್ ತೀರ್ಪಿನ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿ ಕುರಿತು ಸಂಜನಾ ಗಲ್ರಾನಿ ಮತ್ತು ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಮತ್ತು ಆದಿತ್ಯ ಮೋಹನ್ ಅಗರ್ವಾಲ್ ಅವರಿಂದ ಪ್ರತಿಕ್ರಿಯೆ ಕೇಳಿದೆ.
ಪಂಚತಾರಾ ಪಾರ್ಟಿಗಳಿಗಾಗಿ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಮಾದಕ ವಸ್ತುಗಳನ್ನು ಖರೀದಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.