
ಚೆಕ್ ಅಮಾನ್ಯ ಪ್ರಕರಣ: ರೂ. 20 ಸಾವಿರ ಮೇಲ್ಪಟ್ಟ ನಗದು ವ್ಯವಹಾರ ನಿರ್ವಹಣೆಗೆ ಯೋಗ್ಯ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Sunday, September 21, 2025
ಚೆಕ್ ಅಮಾನ್ಯ ಪ್ರಕರಣ: ರೂ. 20 ಸಾವಿರ ಮೇಲ್ಪಟ್ಟ ನಗದು ವ್ಯವಹಾರ ನಿರ್ವಹಣೆಗೆ ಯೋಗ್ಯ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
20 ಸಾವಿರಕ್ಕೂ ಮೇಲ್ಪಟ್ಟ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ನಡೆಸಿದ್ದ ಹಿನ್ನೆಲೆಯಲ್ಲಿ ಉದ್ಭವಿಸಿದ ಚೆಕ್ ಅಮಾನ್ಯ ಪ್ರಕರಣವೂ ನಿರ್ವಹಣೆಗೆ ಯೋಗ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ವಿಪುಲ್ ಎಂ. ಪಂಚೋಲಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಇತ್ತೀಚೆಗೆ ಕೇರಳ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಬದಿಗೆ ಸರಿಸಿದೆ. 20 ಸಾವಿರಕ್ಕೆ ಮೇಲ್ಪಟ್ಟ ನಗದು ವಹಿವಾಟನ್ನು ಒಳಗೊಂಡ ಪ್ರಕರಣದ ಚೆಕ್ ಅಮಾನ್ಯ ಪ್ರಕರಣ ನಿರ್ವಹಣೆಗೆ ಯೋಗ್ಯವಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.