-->
ಸಿವಿಲ್ ದಾವೆ ಚಾಲ್ತಿಯಲ್ಲಿ ಇರುವಾಗ ಚೆಕ್ ಬೌನ್ಸ್ ಕೇಸ್ ಹಾಕಬಹುದೇ..?- ದೆಹಲಿ ಹೈಕೋರ್ಟ್ ತೀರ್ಪು

ಸಿವಿಲ್ ದಾವೆ ಚಾಲ್ತಿಯಲ್ಲಿ ಇರುವಾಗ ಚೆಕ್ ಬೌನ್ಸ್ ಕೇಸ್ ಹಾಕಬಹುದೇ..?- ದೆಹಲಿ ಹೈಕೋರ್ಟ್ ತೀರ್ಪು

ಸಿವಿಲ್ ದಾವೆ ಚಾಲ್ತಿಯಲ್ಲಿ ಇರುವಾಗ ಚೆಕ್ ಬೌನ್ಸ್ ಕೇಸ್ ಹಾಕಬಹುದೇ..?- ದೆಹಲಿ ಹೈಕೋರ್ಟ್ ತೀರ್ಪು





ವ್ಯಕ್ತಿ ಯಾ ಸಂಸ್ಥೆಯೊಂದರ ವಿರುದ್ಧ ಸಿವಿಲ್ ದಾವೆ ಚಾಲ್ತಿಯಲ್ಲಿ ಇರುವಾಗ ಚೆಕ್ ಬೌನ್ಸ್ ಕೇಸ್ ದಾಖಲಿಸಲು ಕಾನೂನಿನಲ್ಲಿ ಯಾವುದೇ ನಿಷೇಧ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.


ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಗಿರೀಶ್ ಕತ್ಪಾಲಿಯಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಶ್ರೀಮತಿ ರಮಾ ಓಬೆರಾಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.


ಬಾಕಿ ಇರುವ ಹಣ ವಸೂಲಾತಿಗಾಗಿ ವ್ಯಕ್ತಿಯೊಬ್ಬರ ವಿರುದ್ಧ ಸಿವಿಲ್ ಕೇಸ್ ಹಾಕಿದ್ದರೂ ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್‌ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಕ್ರಿಮಿನಲ್ ದಾಖಲಿಸಲು ಕಾನೂನಿನ ಅಡಿಯಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಸಿವಿಲ್ ಕೇಸ್ ಇದ್ದಾಗಲೇ ತಮ್ಮ ವಿರುದ್ಧ ಚೆಕ್ ಕೇಸ್ ಹಾಕಲಾಗಿದೆ. ಇದನ್ನು ರದ್ದುಪಡಿಸಬೇಕು ಎಂದು ಕೋರಿ ರಮಾ ಓಬೇರಾಯ್ ಹೈಕೋರ್ಟ್ ಮೊರೆ ಹೋಗಿದ್ದರು.


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 528ರ ಅಡಿಯಲ್ಲಿ ಹೈಕೋರ್ಟ್‌ ನ್ಯಾಯವ್ಯಾಪ್ತಿಯ ಅಧಿಕಾರ ಸೀಮಿತವಾಗಿದ್ದು, ಈ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.


'ಕೆ. ಭಾಸ್ಕರನ್ ವಿರುದ್ಧ ಶಂಕರನ್ ವೈಧ್ಯಾನ್ ಬಾಲನ್' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿ ಈ ತೀರ್ಪು ನೀಡಿದೆ.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu