-->
ಬಾಡಿಗೆ ಕಾಯ್ದೆ: ದಾವಾ ಆಸ್ತಿ ಮಾಲಕ ಎಂದು ಸಾಬೀತುಪಡಿಸಿದರೆ ವಿವರವಾದ ವಿಚಾರಣೆ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್

ಬಾಡಿಗೆ ಕಾಯ್ದೆ: ದಾವಾ ಆಸ್ತಿ ಮಾಲಕ ಎಂದು ಸಾಬೀತುಪಡಿಸಿದರೆ ವಿವರವಾದ ವಿಚಾರಣೆ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್

ಬಾಡಿಗೆ ಕಾಯ್ದೆ: ದಾವಾ ಆಸ್ತಿ ಮಾಲಕ ಎಂದು ಸಾಬೀತುಪಡಿಸಿದರೆ ವಿವರವಾದ ವಿಚಾರಣೆ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್

ಕರ್ನಾಟಕ ಬಾಡಿಗೆ ಕಾಯ್ದೆಯಡಿ ಸ್ವಾಧೀನ ಕೋರಿ ಸಲ್ಲಿಸಿದ ಪ್ರಕರಣದಲ್ಲಿ ಕಟ್ಟಡದ ಮಾಲಕ ಹಾಗೂ ಬಾಡಿಗೆದಾರರ ಸಂಬಂಧವನ್ನು ನಿರೂಪಿಸಲು ಬಾಡಿಗೆ ಚೀಟಿಯನ್ನು ಹಾಜರುಪಡಿಸಿದರೆ ಸಾಕು. ಕಟ್ಟಡದ ಒಡೆತನದ ಕುರಿತು ವಿವರವಾದ ವಿಚಾರಣೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಜೆ.ಕೆ. ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಕರ್ನಾಟಕ ಬಾಡಿಗೆ ಕಾಯ್ದೆಯ ಸೆಕ್ಷನ್ 3(e)ಅಡಿಯಲ್ಲಿ ತಾನೊಬ್ಬ ಭೂಮಾಲೀಕ ಎಂಬುದನ್ನು ಸಾಬೀತುಪಡಿಸಲು ಬಾಡಿಗೆ ಚೀಟಿ ಅಥವಾ ತತ್ಸಂಬಂಧಿ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ ಸಾಕು. ಒಮ್ಮೆ ಆತ ದಾವಾ ಆಸ್ತಿಗೆ ಮಾಲಕ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದರೆ ವಿವರವಾದ ವಿಚಾರಣೆಗೆ ಹೋಗುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣ: ಎಚ್.ಎಸ್. ಪುಟ್ಟಶಂಕರ ವಿರುದ್ಧ ಯಶೋಧಮ್ಮ

ಸುಪ್ರೀಂ ಕೋರ್ಟ್‌ (2025 INSC 1087) Dated 09-09-2025

Ads on article

Advertise in articles 1

advertising articles 2

Advertise under the article