ಸರ್ಫೇಸಿ ಕಾಯ್ದೆ: ವಿವಾದ ಬಗೆಹರಿಸಲು ಮ್ಯಾಜಿಸ್ಟ್ರೇಟರಿಗೆ ಅಧಿಕಾರವಿಲ್ಲ- ಕರ್ನಾಟಕ ಹೈಕೋರ್ಟ್
ಸರ್ಫೇಸಿ ಕಾಯ್ದೆ: ವಿವಾದ ಬಗೆಹರಿಸಲು ಮ್ಯಾಜಿಸ್ಟ್ರೇಟರಿಗೆ ಅಧಿಕಾರವಿಲ್ಲ- ಕರ್ನಾಟಕ ಹೈಕೋರ್ಟ್
ಸರ್ಫೇಸಿ ಕಾಯ್ದೆಯ ಸೆಕ್ಷನ್ 14ರ ಅಡಿಯಲ್ಲಿ ವಿವಾದಗಳನ್ನು ಇತ್ಯರ್ಥ ಪಡಿಸಲು ಮ್ಯಾಜಿಸ್ಟ್ರೇಟರಿಗೆ ಯಾವುದೇ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸರ್ಫೇಸಿ ಕಾಯ್ದೆಯ ಸೆಕ್ಷನ್ 14ರ ಅಡಿಯಲ್ಲಿ ನ್ಯಾಯಾಧೀಶರು ಕೇವಲ ಲಿಪಿಕ ಕಾರ್ಯವನ್ನು ನಿರ್ವಹಿಸುತ್ತಾರೆ. ಸಾಲಗಾರರು ಅಥವಾ ಮೂರನೇ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲು ಅಥವಾ ವಿವಾದಗಳನ್ನು ಇತ್ಯರ್ಥ ಪಡಿಸಲು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಒಂದು ವೇಳೆ, ಸಾಲಗಾರರು ಅಥವಾ ಮೂರನೇ ವ್ಯಕ್ತಿಗಳು ಆಕ್ಷೇಪಣೆ ಅಥವಾ ಹಕ್ಕು ಸ್ಥಾಪಿಸಲು ಸೆಕ್ಷನ್ 17 ಅಡಿಯಲ್ಲಿ ಸಾಲ ವಸೂಲಾತಿ ನ್ಯಾಯಮಂಡಳಿ (ಡೆಟ್ ರಿಕವರಿ ಟ್ರಿಬ್ಯೂನಲ್)ಗೆ ಮೊರೆ ಹೋಗಬೇಕು. ಅದನ್ನು ಹೊರತುಪಡಿಸಿ ಸಿವಿಲ್ ಕೋರ್ಟ್ ಅಥವಾ ಅನ್ಯ ಮಾರ್ಗವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಪ್ರಕರಣ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಮೆ. ಸ್ವಾತಿ ಏಜನ್ಸೀಸ್
ಕರ್ನಾಟಕ ಹೈಕೋರ್ಟ್, WP 105775/2025 (2025: KHC-D:11496) Dated 08-09-2025
Magistrate performs only ministerial function under section 14 of SARFAESI Act. He has no authority to adjudicate disputes or entertain objection from borrowers or third parties.
Karnataka High Court