-->
ಸೆಲ್ಫಿ, ರೀಲ್ಸ್‌ಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವಕಾಶವಿಲ್ಲ: ಉಲ್ಲಂಘಿಸಿದರೆ ಕಠಿಣ ಶಿಕ್ಷೆ!

ಸೆಲ್ಫಿ, ರೀಲ್ಸ್‌ಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವಕಾಶವಿಲ್ಲ: ಉಲ್ಲಂಘಿಸಿದರೆ ಕಠಿಣ ಶಿಕ್ಷೆ!

ಸೆಲ್ಫಿ, ರೀಲ್ಸ್‌ಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವಕಾಶವಿಲ್ಲ: ಉಲ್ಲಂಘಿಸಿದರೆ ಕಠಿಣ ಶಿಕ್ಷೆ!





ಸುಪ್ರೀಂ ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆಯುವುದು, ಫೋಟೋ ಕ್ಲಿಕ್ ಮಾಡುವುದು ಮತ್ತು ರೀಲ್ಸ್‌ ಮಾಡುವುದಕ್ಕೆ ಅವಕಾಶವಿಲ್ಲ. ಈ ನಿರ್ಬಂಧ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಗ್ಯಾರಂಟಿ.


ಸುಪ್ರೀಂ ಕೋರ್ಟ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, . ಸೆಲ್ಫಿ ತೆಗೆಯುವುದು, ಫೋಟೋ ಕ್ಲಿಕ್ ಮಾಡುವುದು ಮತ್ತು ರೀಲ್ಸ್‌ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.


ವಕೀಲರು, ದಾವೆದಾರರು, ಇಂಟರ್ನಿಗಳು, ಕಾನೂನು ಗುಮಾಸ್ತರು, ಸಿಬ್ಬಂದಿ ಯಾ ಸಂದರ್ಶಕರಿಗೆ ಈ ಸುತ್ತೋಲೆ ಅನ್ವಯಿಸುತ್ತದೆ. ಆದರೆ, ಅಧಿಕೃತ ಬಳಕೆಗೆ ವಿನಾಯಿತಿ ನೀಡಲಾಗಿದೆ.


ಸುಪ್ರೀಂ ಕೋರ್ಟ್‌ ನವದೆಹಲಿಯ ಅತಿ ಭದ್ರತಾ ವಲಯಗಳಲ್ಲಿ ಒಂದಾಗಿದ್ದು, ನ್ಯಾಯಾಲಯದ ಹುಲ್ಲು ಹಾಸಿನ ಪ್ರದೇಶಕ್ಕೂ ನಿಷೇಧ ವಿಸ್ತರಿಸಲಾಗಿದೆ.


ಕಡಿಮೆ ಭದ್ರತಾ ವಲಯದ ವರ್ಗಕ್ಕೆ ಸೇರುವ ನಿರ್ದಿಷ್ಟ ಹುಲ್ಲು ಹಾಸಿನಲ್ಲಿ ಮಾತ್ರ ಸಂದರ್ಶನಗಳು, ನೇರ ಪ್ರಸಾರಗಳನ್ನು ನಡೆಸುವಂತೆ ಮಾಧ್ಯಮ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಈ ನಿರ್ಬಂಧ ಉಲ್ಲಂಘಿಸಿದರೆ ಅತಿ ಭದ್ರತಾ ವಲಯದಿಂದ ಒಂದು ತಿಂಗಳ ಕಾಲ ಗಡಿಪಾರು ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ನಿರ್ಬಂಧಿತ ಪ್ರದೇಶದಲ್ಲಿ ಯಾರಾದರೂ ಛಾಯಾಚಿತ್ರ, ವೀಡಿಯೋ ಮಾಡಲು ಮುಂದಾದರೆ ಅವರನ್ನು ತಡೆಯಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu