-->
ವಕೀಲರು ಸಮಾಜ ತಿದ್ದುವ ವೈದ್ಯರು, ದೇಶ ಬದಲಾಯಿಸುವ ಶಕ್ತಿವಂತರು- ನ್ಯಾ. ಅರವಿಂದ ಕುಮಾರ್‌

ವಕೀಲರು ಸಮಾಜ ತಿದ್ದುವ ವೈದ್ಯರು, ದೇಶ ಬದಲಾಯಿಸುವ ಶಕ್ತಿವಂತರು- ನ್ಯಾ. ಅರವಿಂದ ಕುಮಾರ್‌

ವಕೀಲರು ಸಮಾಜ ತಿದ್ದುವ ವೈದ್ಯರು, ದೇಶ ಬದಲಾಯಿಸುವ ಶಕ್ತಿವಂತರು- ನ್ಯಾ. ಅರವಿಂದ ಕುಮಾರ್‌





ವಕೀಲರು ಸಮಾಜವನ್ನು ತಿದ್ದುವ ವೈದ್ಯರಿದ್ದಂತೆ. ಅವರಿಗೆ ದೇಶವನ್ನೇ ಬದಲಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಇದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅಭಿಪ್ರಾಯಪಟ್ಟಿದ್ಧಾರೆ.


ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ 'ನ್ಯಾಯಮಿತ್ರ ಸಹಕಾರಿ ಸಂಘ'ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡುತ್ತಿದ್ದರು.


ಯುವ ವಕೀಲರು ವಿಚಾರಣಾ ನ್ಯಾಯಾಲಯದಲ್ಲಿ ವೃತ್ತಿ ಜೀವನ ಆರಂಭಿಸುವುದು ಉತ್ತಮ. ಏಕೆಂದರೆ ಅಲ್ಲಿ ಸಿಗುವ ಉತ್ತಮವಾದ ವೃತ್ತಿ ಅನುಭವ ಎಲ್ಲಿಯೂ ಸಿಗಲಾರದು ಎಂದು ಅವರು ಸಲಹೆ ನೀಡಿದರು.


ರೋಗಪೀಡಿತ ಸಮಾಜವನ್ನು ತಿದ್ದುವ ಶಕ್ತಿ ವಕೀಲರಿಗೆ ಇದೆ. ಅವರು ಮನಸ್ಸು ಮಾಡಿದರೆ ಸಮಾಜಮತ್ತು ದೇಶವನ್ನೇ ಬದಲಾಯಿಸಬಹುದು ಎಂದು ಹೇಳಿದ ಅವರು, ವಕೀಲರಿಗಾಗಿ ವಸತಿ ನಿವೇಶನಗಳನ್ನು ದೊಡ್ಡ ಪ್ರಮಾಣದಲ್ಲಿ ಮಂಜೂರು ಮಾಡಬೇಕು. ವಕೀಲರ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಇರುವ ಭೂಮಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.


'ನ್ಯಾಯಮಿತ್ರ ಸಹಕಾರಿ ಸಂಘ'ದ ಬೆಳ್ಳಿ ಮಹೋತ್ಸವವು ಸ್ಥಿರತೆ, ಬಾಂಧವ್ಯ, ಬದ್ಧತೆ ಮತ್ತು ಸಾಧನೆಯ ಪ್ರತೀಕವಾಗಿದೆ. ನನ್ನ ವೃತ್ತಿ ಜೀವನ ಆರಂಭ ಆಗಿದ್ದು ವಕೀಲರ ಸಹಕಾರಿ ಸಂಘದಲ್ಲಿ. ನನ್ನ ಎಲ್ಲಾ ಸಾಧನೆಯೂ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ಸಹಕಾರಿ ಬ್ಯಾಂಕ್‌ಗೆ ಸಲ್ಲುತ್ತದೆ ಎಂದು ನ್ಯಾಯಮೂರ್ತಿ ಅರವಿಂದ್ ತಮ್ಮ ವೃತ್ತಿಜೀವನದ ಅನುಭವನ್ನು ನೆನಪಿಸಿದರು.


ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಸ್.ಎಸ್. ಮಿಠಲ್‌ಕೋಡ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಕಾರ್ಯದರ್ಶಿ ಪ್ರವೀಣ್ ಗೌಡ ಮೊದಲಾದವರು ಉಪಸ್ಥಿತರಿದ್ದರು.


ಬೆಂಗಳೂರು ವಕೀಲರ ಸಹಕಾರಿ ಸಂಘದ ಅಧ್ಯಕ್ಷ ನಂಜಪ್ಪ ಕಲ್ಲೇಗೌಡ, ವಕೀಲರ ಸಂಘದ ಸಾಹಿತ್ಯ ಒಕ್ಕೂಟದ ಅಧ್ಯಕ್ಷ ಮಂಜುನಾಥ ಬಿ. ಗೌಡ ಉಪಸ್ಥಿತರಿದ್ದರು. ನ್ಯಾಯಮಿತ್ರ ಸಹಕಾರಿ ಸಂಘದ ಅಧ್ಯಕ್ಷ ಎಸ್.ಯತಿರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


Ads on article

Advertise in articles 1

advertising articles 2

Advertise under the article