
Defense Counsel in DLSA | ಕಾನೂನು ನೆರವು ಅಭಿರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಕಾನೂನು ನೆರವು ಅಭಿರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಖಾಲಿ ಇರುವ ಮೂರು ಉಪ ಮುಖ್ಯ ಕಾನೂನು ನೆರವು ಅಭಿರಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಟ 7 ವರ್ಷಗಳ ಕಾಲ ಕ್ರಿಮಿನಲ್ ಕಾನೂನಿನಲ್ಲಿ ಅಭ್ಯಾಸ ಮಾಡಿರಬೇಕು. ಕ್ರಿಮಿನಲ್ ಕಾನೂನಿನ ಬಗ್ಗೆ ಪರಿಪೂರ್ಣ ಜ್ಞಾನವನ್ನು ಹೊಂದಿರಬೇಕು. ಮಾತುಗಾರಿಕೆ, ಬರವಣಿಗೆ ಮತ್ತು ಸಂವಹನ ಕೌಶಲವನ್ನು ಹೊಂದಿರಬೇಕು.
ಕಾನೂನು ಸಂಶೋಧನಾ ಕೌಶಲ್ಯವನ್ನು ಹೊಂದಿರಬೇಕು. ಕಾನೂನು ಅಭಿರಕ್ಷಕರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರಬೇಕು. ಇತರರೊಂದಿಗೆ ಪರಿಣಾಮಕಾರಿ ಹಾಗೂ ಸಮರ್ಥವಾಗಿ ಕೆಲಸಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಕಂಪ್ಯೂಟರ್ ಬಳಕೆ, ನಿರ್ವಹಣೆಯಂತ ಮಾಹಿತಿ ತಂತ್ರಜ್ಞಾನ (ಐ.ಟಿ) ಜ್ಞಾನವನ್ನು ಹೊಂದಿರಬೇಕು.
ಸೆಷನ್ಸ್ ನ್ಯಾಯಾಲಯದಲ್ಲಿ ಕನಿಷ್ಠ 20 ಕ್ರಿಮಿನಲ್ ವಿಚಾರಣೆಯನ್ನು ನಿರ್ವಹಿಸಿರಬೇಕು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಅಸಾಧಾರಣ ಸಂದರ್ಭಗಳಲ್ಲಿ ಈ ಷರತ್ತನ್ನು ಸಡಿಲಿಸಬಹುದಾಗಿದೆ.
ವೇತನ 40,000 ರೂ.ನಿಂದ 60,000 ರೂ.ವರೆಗೆ. ನಗರಗಳ ಜನಸಂಖ್ಯಾ ಆಧಾರದ ಮೇರೆಗೆ ಅವಲಂಬಿತವಾಗಿರುತ್ತದೆ
ಅರ್ಜಿ ಸಲ್ಲಿಸಲು ಆ. 25 ಕೊನೆಯ ದಿನವಾಗಿದೆ. ನೇಮಕಾತಿ ಪ್ರಕ್ರಿಯೆ ಸಂದರ್ಶನದ ಮೂಲಕ ನಡೆಯಲಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯನ್ನು (ದೂರವಾಣಿ ಸಂಖ್ಯೆ- 08242448111) ಸಂಪರ್ಕಿಸಲು ಕೋರಲಾಗಿದೆ.