ಸುಪ್ರೀಂ ಕಾಲಮಿತಿ ನೆಪದಲ್ಲಿ ನ್ಯಾಯವ್ಯಾಪ್ತಿ ಇಲ್ಲ ಎಂದು ಇತ್ಯರ್ಥಕ್ಕೆ ನಿರಾಕರಣೆ: ಆದೇಶದ ಬಗ್ಗೆ ಮ್ಯಾಜಿಸ್ಟ್ರೇಟರ ವಿವರಣೆ ಕೇಳಿದ ಸುಪ್ರೀಂ ಕೋರ್ಟ್
ಸುಪ್ರೀಂ ಕಾಲಮಿತಿ ನೆಪದಲ್ಲಿ ನ್ಯಾಯವ್ಯಾಪ್ತಿ ಇಲ್ಲ ಎಂದು ಇತ್ಯರ್ಥಕ್ಕೆ ನಿರಾಕರಣೆ: ಆದೇಶದ ಬಗ್ಗೆ ಮ್ಯಾಜಿಸ್ಟ್ರೇಟರ ವಿವರಣೆ ಕೇಳಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ನಿರ್ದೇಶಿಸಿದ ಅವಧಿಯೊಳಗೆ ಪ್ರಕರಣದ ವಿಲೇವಾರಿ ಆಗದಿರುವುದರಿಂದ ತನಗೆ ನ್ಯಾಯ ವ್ಯಾಪ್ತಿ ಇಲ್ಲವೆಂದು ಪ್ರಕರಣವನ್ನು ಇತ್ಯರ್ಥಪಡಿಸಲು ನಿರಾಕರಿಸಿದ ಮ್ಯಾಜಿಸ್ಟ್ರೇಟ್‌ನಿಂದ ವಿವರಣೆ ಕೋರಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯದೊಳಗೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಸಾಧ್ಯವಾಗದ ಕಾರಣ ಸದರಿ ಪ್ರಕರಣವನ್ನು ಮುಂದುವರಿಸಲು ನ್ಯಾಯವ್ಯಾಪ್ತಿಯನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ಪ್ರಕರಣವನ್ನು ಮುಂದುವರಿಸಲಾಗುವುದಿಲ್ಲ ಎಂಬ ನಿಲುವು ತಳೆದ ಮ್ಯಾಜಿಸ್ಟ್ರೇಟ್ ಅವರಿಂದ ಸುಪ್ರೀಂ ಕೋರ್ಟ್ ವಿವರಣೆ/ಸಮಜಾಯಿಷಿ ನೀಡುವಂತೆ ಆದೇಶ ಹೊರಡಿಸಿದೆ.
ಆರು ವಾರಗಳ ಅವಧಿಯಲ್ಲಿ ಪ್ರಕರಣವೊಂದನ್ನು ವಿಲೇವಾರಿ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸದರಿ ನಿರ್ದೇಶನದನ್ವಯ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಮ್ಯಾಜಿಸ್ಟ್ರೇಟ್ ರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಪ್ರಕರಣವನ್ನು ಮುಂದುವರಿಸಲು ತನಗೆ ನ್ಯಾಯ ವ್ಯಾಪ್ತಿ ಇಲ್ಲ ಎಂಬುದು ಮ್ಯಾಜಿಸ್ಟ್ರೇಟ್ ಅವರ ನಿಲುವಾಗಿತ್ತು.
ಮ್ಯಾಜಿಸ್ಟ್ರೇಟ್ ರವರ ಈ ನಿಲುವಿನಿಂದ ಅಸಂತುಷ್ಟಗೊಂಡ ನ್ಯಾಯಮೂರ್ತಿ ಪಂಕಜ್ ಮಿಥಲ್, ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ವಿಭಾಗೀಯ ನ್ಯಾಯಪೀಠವು ಜಿಲ್ಲಾ ನ್ಯಾಯಾಧೀಶರಿಗೆ ಸಂಬಂಧಪಟ್ಟ ನ್ಯಾಯಾಧೀಶರಿಂದ ವಿವರಣೆಯನ್ನು ಕೇಳಿ ಸುಪ್ರೀಂ ಕೋರ್ಟ್‌ಗೆ ವರದಿ ಮಾಡುವಂತೆ ನಿರ್ದೇಶಿಸಿದೆ. ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಇತ್ಯರ್ಥ ಪಡಿಸಲು ನಿರಾಕರಿಸಿದ ನಂತರ ಸುಪ್ರೀಂ ಕೋರ್ಟ್ ಈ ರೀತಿ ಅಭಿಪ್ರಾಯ ಪಟ್ಟಿದೆ.
ನಿಗದಿಪಡಿಸಿದ ಸಮಯದೊಳಗೆ ಪ್ರಕರಣದ ಇತ್ಯರ್ಥ ಸಾಧ್ಯವಾಗದ ಕಾರಣ ಮ್ಯಾಜಿಸ್ಟ್ರೇಟ್ ಈ ಪ್ರಕರಣದ ವಿಲೇವಾರಿ ಬಗ್ಗೆ ನ್ಯಾಯ ವ್ಯಾಪ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮ್ಯಾಜಿಸ್ಟ್ರೇಟ್ ಅವರು ಈ ವಿಷಯದ ಬಗ್ಗೆ ನ್ಯಾಯ ವ್ಯಾಪ್ತಿ ಇಲ್ಲವೆಂದು ಏಕೆ ಹೇಳಿದ್ದಾರೆ ಮತ್ತು ವಿಚಾರಣೆಯನ್ನು ಮುಂದುವರಿಸಲು ಅಸಾಧ್ಯ ಎಂಬ ನಿಲುವು ತಳೆಯಲು ಕಾರಣ ಮತ್ತು ಸಂದರ್ಭಗಳನ್ನು ತಿಳಿಸಬೇಕಾಗುತ್ತದೆ.
ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರ ಪೀಠವು, "ಪ್ರಾಜ್ಞ ನ್ಯಾಯಾಧೀಶರು ಆದೇಶವನ್ನು ನೀಡಿದ ರೀತಿಯನ್ನು ಗಮನಿಸಿದಾಗ ನಮಗೆ ನೋವುಂಟಾಗಿದೆ. ಯಾವುದೇ ಕಾರಣಕ್ಕಾಗಿ, ನ್ಯಾಯಾಧೀಶರು ಈ ನ್ಯಾಯಾಲಯವು ನಿಗದಿಪಡಿಸಿದ ನಿಗದಿತ ಅವಧಿಯೊಳಗೆ ವಿಷಯವನ್ನು ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಲಭ್ಯವಿರುವ ಸೂಕ್ತ ಪರಿಹಾರವೆಂದರೆ ಸಮಯ ವಿಸ್ತರಣೆಯನ್ನು ಕೇಳುವುದು. ಆದರೆ ಅನುಮತಿಸಲಾದ ಸಮಯ ಕಳೆದುಹೋಗಿರುವುದರಿಂದ ಅವರು ವಿಷಯದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ."
ಪ್ರಕರಣದ ಸಂಕ್ಷಿಪ್ತ ವಿವರಣೆ:
ಸುಪ್ರೀಂ ಕೋರ್ಟ್ ಜನವರಿ 18, 2024 ರಂದು ನೀಡಿದ ತನ್ನ ಆದೇಶದಲ್ಲಿ ಪರಗಣಾಸ್‌ನ ದಕ್ಷಿಣ 24ರ ಅಲಿಪೋರ್‌ನಲ್ಲಿರುವ 4ನೇ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಗೆ ಆರು ವಾರಗಳ ಅವಧಿಯಲ್ಲಿ ಪ್ರಕರಣವನ್ನು ವಿಲೇವಾರಿ ಮಾಡುವಂತೆ ನಿರ್ದೇಶಿಸಿತು.
ಸದರಿ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಸೂಚಿಸಿದ ಅವಧಿಯೊಳಗೆ ಪ್ರಕರಣವನ್ನು ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ಮಾರ್ಚ್ 2024 ರಲ್ಲಿ ಮ್ಯಾಜಿಸ್ಟ್ರೇಟ್ ಆದೇಶವನ್ನು ಹೊರಡಿಸಿದರು. ನಿಗದಿತ ಸಮಯದೊಳಗೆ ವಿಷಯವನ್ನು ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ, ಪ್ರಕರಣವನ್ನು ಮುಂದುವರಿಸಲು ನ್ಯಾಯಾಲಯವು ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಎಂಬುದು ಮ್ಯಾಜಿಸ್ಟ್ರೇಟ್ ಅವರ ನಿಲುವಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ಅವಲೋಕನ
ಯಾವುದೇ ಕಾರಣಕ್ಕಾಗಿ, ನ್ಯಾಯಾಧೀಶರು ನಿಗದಿತ ಅವಧಿಯೊಳಗೆ ವಿಷಯವನ್ನು ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಲಭ್ಯವಿರುವ ಸೂಕ್ತ ಪರಿಹಾರವೆಂದರೆ ಸಮಯ ವಿಸ್ತರಣೆಯನ್ನು ಕೇಳುವುದು ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತು. ನಿರ್ಣಾಯಕವಾಗಿ, ಜಿಲ್ಲಾ ನ್ಯಾಯಾಧೀಶರಿಗೆ ಸಂಬಂಧಪಟ್ಟ ನ್ಯಾಯಾಧೀಶರಿಂದ ವಿವರಣೆಯನ್ನು ಪಡೆದು ಒಂದು ತಿಂಗಳೊಳಗೆ ಸುಪ್ರೀಂ ಕೋರ್ಟ್‌ಗೆ ವರದಿ ಮಾಡುವಂತೆ ನಿರ್ದೇಶಿಸಿತು. ಯಾಕೆ ಮತ್ತು ಯಾವ ಸಂದರ್ಭಗಳಲ್ಲಿ, ಅವರು ಈ ವಿಷಯದ ಬಗ್ಗೆ ತಮ್ಮ ಅಧಿಕಾರ ವ್ಯಾಪ್ತಿಯನ್ನು ನಿಲ್ಲಿಸಿದ್ದಾರೆ ಮತ್ತು ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಿಲ್ಲ ಎಂದು ವರದಿ ಮಾಡಿದ್ದಾರೆ ಎಂಬುದನ್ನು ಮ್ಯಾಜಿಸ್ಟ್ರೇಟ್ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪ್ರಕರಣದ ಶೀರ್ಷಿಕೆ: ಶಿವ ಕುಮಾರ್ ಶಾ ಮತ್ತು ಇನ್ನೊಬ್ಬರು ವಿರುದ್ಧ ರೇಖಾ ಶಾ
ಸುಪ್ರೀಂ ಕೋರ್ಟ್, Misc. Appl 45777/2024 Dated 26-09-2025