-->
ಬಡ ಕಕ್ಷಿದಾರರಿಗಾಗಿ ರಾತ್ರಿವರೆಗೂ ಕೋರ್ಟ್‌ನಲ್ಲೇ ಇರುವೆ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌

ಬಡ ಕಕ್ಷಿದಾರರಿಗಾಗಿ ರಾತ್ರಿವರೆಗೂ ಕೋರ್ಟ್‌ನಲ್ಲೇ ಇರುವೆ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌

ಬಡ ಕಕ್ಷಿದಾರರಿಗಾಗಿ ರಾತ್ರಿವರೆಗೂ ಕೋರ್ಟ್‌ನಲ್ಲೇ ಇರುವೆ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌





ಬಡ ಕಕ್ಷಿದಾರರಿಗಾಗಿ ರಾತ್ರಿವರೆಗೂ ಕೋರ್ಟ್‌ನಲ್ಲೇ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಹೇಳಿದ್ಧಾರೆ.


“ಬಡ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ಅವರಿಗಾಗಿ ಮಧ್ಯರಾತ್ರಿಯವರೆಗೆ ಕೋರ್ಟ್ ನಲ್ಲಿಯೇ ಇರಲು ಸಿದ್ಧ'' ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.


ಕೇಂದ್ರ ಸರಕಾರ ಹಾಗೂ ಮತ್ತಿತರರ ವಿರುದ್ದ ತಿಲಕ್ ಸಿಂಗ್ ಡಾಂಗಿ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.


"ನನ್ನ ಕೋರ್ಟ್‌ನಲ್ಲಿ ಯಾವುದೇ ಐಷಾರಾಮಿ ಮೊಕದ್ದಮೆಗಳಿಲ್ಲ. ಅಂತಹ ಪ್ರಕರಣಗಳನ್ನು ಶ್ರೀಮಂತ ಕಕ್ಷಿದಾರರು ಮುಂದುವರಿಸುತ್ತಾರೆ. ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ದುರ್ಬಲ ಜನರಿಗಾಗಿ ನಾನು ಇಲ್ಲಿದ್ದೇನೆ. ಬಡ ಕಕ್ಷಿದಾರರಿಗಾಗಿ ಇಲ್ಲಿದ್ದೇನೆ'' ಎಂದು ಸೂರ್ಯಕಾಂತ್ ಹೇಳಿದ್ದಾರೆ.


ಹರಿಯಾಣದ ಹಿಸ್ಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದವರಾದ ಸಿಜೆಐ ಸೂರ್ಯಕಾಂತ್ ಅವರು ನ.24 ರಂದು ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.


Ads on article

Advertise in articles 1

advertising articles 2

Advertise under the article