ರೌಡಿಶೀಟರ್ ಜೊತೆ ಸೆಲ್ಫಿ: ಸ್ಥಳ ತೋರಿಸದೆ ಇನ್‌ಸ್ಪೆಕ್ಟರ್ ಕಾಲಿಮಿರ್ಚಿ ವರ್ಗಾವಣೆ
Thursday, November 6, 2025
ರೌಡಿಶೀಟರ್ ಜೊತೆ ಸೆಲ್ಫಿ: ಸ್ಥಳ ತೋರಿಸದೆ ಇನ್‌ಸ್ಪೆಕ್ಟರ್ ಕಾಲಿಮಿರ್ಚಿ ವರ್ಗಾವಣೆ
ರೌಡಿಶೀಟರ್ ಜೊತೆ ಸೆಲ್ಫಿ ಕ್ಲಿಕ್ ಮಾಡಿದ ಇನ್‌ಸ್ಪೆಕ್ಟರ್ ಕಾಲಿಮಿರ್ಚಿ ಅವರಿಗೆ ವರ್ಗಾವಣೆಯ ಶಿಕ್ಷೆ ಎದುರಾಗಿದೆ. ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ರಾಜ್ಯೋತ್ಸವದ ದಿನವೇ ಕರಾಳ ದಿನ ಆಚರಿಸಿದ ಎಂಇಎಸ್ ಮುಖಂಡ ಶುಭಂ ಶೆಳಕೆ ಜತೆಗೆ ಆರೋಪಿ ಇನ್ಸ್‌ಪೆಕ್ಟರ್ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದರು.
ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಜೆ.ಎಂ.ಕಾಲಿಮಿರ್ಚಿ ಅವರನ್ನು ಇದೀಗ ಯಾವುದೇ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಸಿಪಿಐ ಬಿ.ಆರ್. ಗಡೇಕರ್ ಅವರನ್ನು ನೇಮಕ ಮಾಡಲಾಗಿದೆ.