-->
ಚೆಕ್ ಬೌನ್ಸ್ ಪ್ರಕರಣ: ರಾಜಿ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ರಾಜಿ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಬೌನ್ಸ್ ಪ್ರಕರಣ: ರಾಜಿ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ರಾಜಿ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಬೌನ್ಸ್ ಪ್ರಕರಣ: ರಾಜಿ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ರಾಜಿ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ- ಹೈಕೋರ್ಟ್ ಮಹತ್ವದ ತೀರ್ಪು





ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜಿ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ರಾಜಿ ಆದೇಶವನ್ನು ಕ್ರಿಮಿನಲ್ ಪ್ರಕ್ರಿಯೆ ಯಾ ಬಲವಂತದ ಕ್ರಮದಿಂದ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಧರ್ ಅವರು ಈ ತೀರ್ಪು ನೀಡಿದ್ದಾರೆ.


ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್‌ ಆಕ್ಟ್ ಸೆಕ್ಷನ್ 138 ಅಡಿಯಲ್ಲಿ ದಾಖಲಾದ ದೂರಿನಲ್ಲಿ ಕಾನೂನುಬದ್ಧವಾದ  ರಾಜಿ (ಕಾಂಪ್ರಮೈಸ್) ದಾಖಲಾದ ನಂತರ, ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ಆ ರಾಜಿಯ ಪ್ರಕಾರವೇ ದೂರನ್ನು ಅಂತಿಮವಾಗಿ ವಿಲೇವಾರಿ ಮಾಡಬೇಕಾಗಿದ್ದು, ಜಾರಿಗೆ ತರುವ ಉದ್ದೇಶದಿಂದ ಕ್ರಿಮಿನಲ್ ಪ್ರಕ್ರಿಯೆ ನಡೆಸಲು ಅಥವಾ ಬಲವಂತದ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.


ಇಂತಹ ಕ್ರಮಕ್ಕೆ ಕಾನೂನಿನಲ್ಲಿ ಅನುಮತಿ ಇಲ್ಲ. ಆದರೆ, ರಾಜಿಯ ಷರತ್ತುಗಳನ್ನು ಪಾಲಿಸದಿರುವ ಕುರಿತು ಯಾವುದೇ ಅಸಮಾಧಾನ ಉಂಟಾದಲ್ಲಿ ಅದನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್‌ನಲ್ಲಿ ನಿರ್ದಿಷ್ಟಪಡಿಸಿರುವಂತೆ ಜಾರಿಗೆ ಸಂಬಂಧಿಸಿದ ಕಾರ್ಯವಿಧಾನಗಳ ಮೂಲಕವೇ ಪರಿಹರಿಸಬೇಕೆಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಹೆಚ್ಚುವರಿ ವಿಶೇಷ ಮೊಬೈಲ್ ಮ್ಯಾಜಿಸ್ಟ್ರೇಟ್, ಬೀರವಾಹ್ ಅವರು ನೀಡಿದ ಆದೇಶವನ್ನು ಪ್ರಶ್ನಿಸಿ ಸಜಾದ್ ಅಹಮದ್ ಮಲಿಕ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ಆ ಆದೇಶದ ಮೂಲಕ ಅವರ ವಿರುದ್ಧ ವಾರಂಟ್‌ಗಳನ್ನು ಜಾರಿಗೊಳಿಸಲಾಗಿತ್ತು


ಅರ್ಜಿದಾರರು ಹೈಕೋರ್ಟ್‌ಗೆ ಮೊರೆ ಹೋಗಿ, ಎನ್‌ಐ ಕಾಯ್ದೆಯ ಸೆಕ್ಷನ್ 138 ಅಡಿಯಲ್ಲಿ ದಾಖಲಾಗಿದ್ದ ದೂರಿನಲ್ಲಿ ಪಕ್ಷಕಾರರ ನಡುವೆ ಈಗಾಗಲೇ ರಾಜಿ ನಡೆದು ನ್ಯಾಯಾಲಯದ ಮುಂದೆ ದಾಖಲಾಗಿದ್ದರೂ, ಮ್ಯಾಜಿಸ್ಟ್ರೇಟ್ ಅವರು ತಮ್ಮ ನ್ಯಾಯಾಧಿಕಾರ ಮೀರಿ ಕ್ರಮ ಕೈಗೊಂಡಿದ್ದಾರೆ ಎಂದು ವಾದಿಸಿದರು.


ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಪ್ರತಿವಾದಿ ಅರ್ಜಿದಾರರಿಂದ ನೀಡಲಾದ ಚೆಕ್ ಮಾನ್ಯವಾಗದೆ ತಿರಸ್ಕೃತವಾಗಿದೆ ಎಂಬ ಆರೋಪದ ಮೇರೆಗೆ ದೂರು ಸಲ್ಲಿಸಿದ್ದಾನೆ ಎಂದು ಗಮನಿಸಿದೆ. ದೂರು ಬಾಕಿಯಿರುವ ಅವಧಿಯಲ್ಲಿ ಪಕ್ಷಗಳು ರಾಜಿ ಪತ್ರಕ್ಕೆ ಸಹಿ ಹಾಕಿದ್ದರು. 


ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು 06.11.2024 ರಂದು ರಾಜಿಯನ್ನು ಸಮರ್ಥಿಸಿಕೊಂಡ ಉಭಯ ಪಕ್ಷಕಾರರ ಹೇಳಿಕೆಗಳನ್ನು ದಾಖಲಿಸಿದ್ದರು. ಆದರೆ, ಹೈಕೋರ್ಟ್ ಗಮನಿಸಿದಂತೆ, ರಾಜಿಯ ಪ್ರಕಾರ ದೂರನ್ನು ವಿಲೇವಾರಿ ಮಾಡುವ ಬದಲು, ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ರಾಜಿಯ ಷರತ್ತುಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡುತ್ತಾ, ಪರಿಣಾಮವಾಗಿ ಜಾರಿಗೆ ತರುವ ನ್ಯಾಯಾಲಯದಂತೆ ಕಾರ್ಯನಿರ್ವಹಿಸಿದ್ದಾರೆ.


ನ್ಯಾಯಮೂರ್ತಿ ಧರ್ ಅವರು ಈ ರೀತಿಯ ಕ್ರಮ ಕಾನೂನಾತ್ಮಕವಾಗಿ ಸ್ಥಿರವಲ್ಲ ಎಂದು ತೀರ್ಮಾನಿಸಿದರು. ಸ್ಪಷ್ಟ ಮತ್ತು ನಿರ್ದಿಷ್ಟವಾದ ಅಭಿಪ್ರಾಯದಲ್ಲಿ, ನ್ಯಾಯಾಲಯ ಹೀಗೆ ಹೇಳಿತು:


“ರಾಜಿಯ ಪ್ರಕಾರ ದೂರನ್ನು ವಿಲೇವಾರಿ ಮಾಡುವ ಬದಲು, ಪ್ರಾಜ್ಞ ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ಅರ್ಜಿದಾರರಿಂದ ರಾಜಿಯ ಷರತ್ತುಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಅಮಲ್ಜಾರಿ ನ್ಯಾಯಾಲಯದಂತೆ ಕಾರ್ಯನಿರ್ವಹಿಸಿದ್ದಾರೆ.”


ಚಲಾವಣೆ ಯೋಗ್ಯ ದಸ್ತಾವೇಜುಗಳ ಅಧಿನಿಯಮದ ಅಡಿಯಲ್ಲಿ ದಾಖಲಾದ ದೂರಿನ ವಿಚಾರಣೆಗೆ ಸಂಬಂಧಿಸಿದ ಕ್ರಿಮಿನಲ್ ಕಾನೂನು ವ್ಯವಸ್ಥೆಗೆ ಇಂತಹ ಪ್ರಕ್ರಿಯೆ ಸಂಪೂರ್ಣವಾಗಿ ಅನ್ಯವಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿತು.


ಸರಿಯಾದ ಕಾನೂನು ಕ್ರಮವನ್ನು ಸ್ಪಷ್ಟಪಡಿಸುತ್ತಾ, ಹೈಕೋರ್ಟ್ ಹೀಗೆ ಅಭಿಪ್ರಾಯಪಟ್ಟಿತು: “ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ರಾಜಿಯ ಷರತ್ತು ಪ್ರಕಾರ ದೂರನ್ನು ವಿಲೇವಾರಿ ಮಾಡಬೇಕಾಗಿತ್ತು. ನಂತರವೂ ಅರ್ಜಿದಾರರು ರಾಜಿಯ ಷರತ್ತುಗಳನ್ನು ಪಾಲಿಸದಿದ್ದಲ್ಲಿ, ಪ್ರತಿವಾದಿಗೆ ಜಾರಿಗೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಲು ಸ್ವಾತಂತ್ರ್ಯ ನೀಡಬೇಕಾಗಿತ್ತು.”


ನ್ಯಾಯಾಲಯವು ಮುಂದುವರೆದು ವಿವರಿಸಿದಂತೆ, ಅಂತಹ ಜಾರಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ ನಂತರ ಮಾತ್ರ ಮ್ಯಾಜಿಸ್ಟ್ರೇಟ್ ಅವರು ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 421 ರಲ್ಲಿ ಒಳಗೊಂಡಿರುವ ವಿಧಾನದ ಮೂಲಕ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿದೆ.


ನ್ಯಾಯಮೂರ್ತಿ ಧರ್ ಅವರು, “ಪ್ರಾಜ್ಞ ವಿಚಾರಣಾ ಮ್ಯಾಜಿಸ್ಟ್ರೇಟ್ ಅವರು ಅನುಸರಿಸಿದ ಪ್ರಕ್ರಿಯೆ ಕಾನೂನಿಗೆ ಅನುಗುಣವಾಗಿಲ್ಲ” ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟರು. ರಾಜಿ ದಾಖಲಾಗಿದ್ದು ಅಂಗೀಕರಿಸಲಾದ ನಂತರ, ಅದನ್ನು ಜಾರಿಗೆ ತರುವ ಉದ್ದೇಶದಿಂದ ಕ್ರಿಮಿನಲ್ ನ್ಯಾಯಾಲಯಗಳು ಮುಂದುವರೆದು ಕ್ರಿಮಿನಲ್ ಪ್ರಕ್ರಿಯೆ ನಡೆಸಲು ಅಥವಾ ಬಲವಂತದ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ಈ ಎಲ್ಲಾ ಅಭಿಪ್ರಾಯಗಳ ಹಿನ್ನೆಲೆಯಲ್ಲಿ, ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿ, ನ್ಯಾಯಾಲಯ ಸೂಚಿಸಿದ ರೀತಿಯಲ್ಲೇ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರಾಜ್ಞ ವಿಚಾರಣಾ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದಿಷ್ಟ ನಿರ್ದೇಶನ ನೀಡಿದೆ. 


ಆದೇಶದ ಪ್ರತಿಯನ್ನು ಅನುಸರಣೆಗಾಗಿ ವಿಚಾರಣಾ ಮ್ಯಾಜಿಸ್ಟ್ರೇಟ್ ಅವರಿಗೆ ಕಳುಹಿಸುವಂತೆ ಕೂಡ ನಿರ್ದೇಶಿಸಲಾಗಿದೆ.


ಪ್ರಕರಣ ಶೀರ್ಷಿಕೆ:

ಸಜಾದ್ ಅಹಮದ್ ಮಲಿಕ್ ವಿರುದ್ಧ ಗುಲ್ಜಾರ್ ಅಹಮದ್ ವಾನಿಲ್

ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್


Ads on article

Advertise in articles 1

advertising articles 2

Advertise under the article